ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿಯ 15 ನೇ ವಾರ್ಡ್‍ನ ಬದ್ರಿಯಾ ನಗರದಲ್ಲಿ ಎಲ್.ಡಿ.ಎಫ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ವತಂತ್ರ ಅಭ್ಯರ್ಥಿಯ ಹೆಸರನ್ನು ಸೇರಿಸಿರುವುದು ಭಾರೀ ವಿವಾದವಾಗಿದೆ.
ಬದ್ರಿಯಾ ನಗರ ರೆಸಿಡೆನ್ಸ್ ಅಸೋಸಿಯೇಶನ್ ನ ಸ್ವತಂತ್ರ ಅಭ್ಯರ್ಥಿಯಾಗಿ ಮೊಹಮ್ಮದ್ ಸ್ಮಾರ್ಟ್ ಅವರು ಸ್ಪರ್ಧಿಸುತ್ತಿದ್ದು, ಈ ಮಧ್ಯೆ ಮಾಧ್ಯಮಗಳಲ್ಲಿ ಅವರು ಎಡರಂಗದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಫೆÇೀಟೋವನ್ನು ಪೆÇೀಸ್ಟ್ ಮಾಡಿರುವ ಬಗ್ಗೆ ವರದಿ ಪ್ರಕಟವಾಗಿತ್ತು. ಈ ಬಗ್ಗೆ 15ನೇ ವಾರ್ಡ್ ಅಭ್ಯರ್ಥಿ ಮೊಹಮ್ಮದ್ ಸ್ಮಾರ್ಟ್ ಮತ್ತು ರೆಸಿಡೆನ್ಸ್ ಅಸೋಸಿಯೇಶನ್ ನ ಅಧಿಕೃತರು ಕುಂಬಳೆ ಪ್ರೆಸ್ ಫೆÇೀರಂ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊಹಮ್ಮದ್ ಸ್ಮಾರ್ಟ್ ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿಯಾ ಅಭ್ಯರ್ಥಿಯಲ್ಲ. ಇವರನ್ನು 15ನೇ ವಾರ್ಡ್ ರೆಸಿಡೆನ್ಸ್ ಅಸೋಸಿಯೇಶನ್ ಆಯ್ಕೆ ಮಾಡಿದೆ. ಇದು 15 ನೇ ವಾರ್ಡ್‍ನ ಜನರ ಸ್ವತಂತ್ರ ಸಂಘಟನೆಯಾಗಿದೆ. ಸಂಪೂರ್ಣವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ ಮೊಹಮ್ಮದ್ ಸ್ಮಾರ್ಟ್ ಯಾವುದೇ ಪಕ್ಷದ ಪ್ರತಿನಿಧಿಯಲ್ಲ ಎಂದು ಮಾಹಿತಿ ನೀಡಿದರು.
ರೆಸಿಡೆನ್ಸ್ ಅಸೋಸಿಯೇಶನ್ ಮುಸ್ಲಿಂ ಲೀಗ್, ಎಡರಂಗ, ವೆಲ್ಪೇರ್ ಪಕ್ಷದ ಕಾರ್ಯಕರ್ತರುಗಳು, ವಿವಿಧ ಪಕ್ಷದ ಸದಸ್ಯರು ಮತ್ತು ಎಲ್ಲಾ ವರ್ಗದ ಪಕ್ಷೇತರರ ಗುಂಪಾಗಿದೆ. ಇದು ಸ್ಥಳೀಯರ ಸಮಸ್ಯೆಗಳನ್ನು ಪರಿಹರಿಸಲು ರಚಿಸಲಾದ ಒಂದು ತಂಡವಾಗಿದೆ. ಆದರೆ ಜನಬೆಂಬಲದೊಂದಿಗೆ ಮುಂದುವರಿಯುತ್ತಿರುವಾಗ, ಅದನ್ನು ದುರ್ಬಲಗೊಳಿಸುವ ಕೆಲವು ಹಿತಾಸಕ್ತಿಗಳ ಪ್ರಯತ್ನದ ಭಾಗವಾಗಿ ವಿವಿಧ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ ಯಾವುದೇ ಹುನ್ನಾರಗಳಿಂದ ಅಸೋಸಿಯೇಶನ್ ನ ನಿರ್ಧಾರಗಳನ್ನು ನಿರ್ವೀರ್ಯಗೊಳಿಸಲು ಸಾಧ್ಯವಿಲ್ಲ ಎಂದು ಅಭ್ಯರ್ಥಿ ಮತ್ತು ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.