ಕಾಸರಗೋಡು: ಜಿಲ್ಲೆಯ 38ಗ್ರಾಮ ಪಂಚಾಯಿತಿ ಸೇರಿ ಒಟ್ಟು 48ಸ್ಥಳೀಯಾಡಳಿತ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ಸೋಮವಾರ ಆಯಾ ಕೇಂದ್ರಗಳಲ್ಲಿ ನೆರವೇರಿತು. ಆರು ಬ್ಲಾಕ್ ಪಂಚಾಯಿತಿ, ಮೂರು ನಗರಸಭೆ, ಒಂದು ಜಿಲ್ಲಾ ಪಂಚಾಯಿತಿಯ ಸದಸ್ಯರು ಈ ಸಂದರ್ಭ ಪ್ರಮಾಣವಚನ ಸ್ವೀಕರಿಸಿದರು.
ನಗರಸಭೆಯ ಹಿರಿಯ ಸದಸ್ಯೆ, ಬಿಜೆಪಿಯ ಸವಿತಾ ಟೀಚರ್ ಮೊದಲು ಪ್ರಮಾಣವಚನ ಸ್ವೀಕರಿಸಿದರು. ಸವಿತಾಟೀಚರ್ ಸಂಸ್ಕøತದಲ್ಲಿ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಮನಸೆಳೆದರು. ನಗರಸಭಾ ಪ್ರತಿಪಕ್ಷ ನೇತಾರರಾಗಿದ್ದ ಬಿಜೆಪಿಯ ರಮೇಶ್ ಪಿ.ಅವರು ಅಯೋಧ್ಯೆ ಶ್ರೀರಾಮಚಂದ್ರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಮುಸ್ಲಿಂಲೀಗ್ ಸದಸ್ಯೆ ನಗರಸಭಾ ಮೂರನೇ ವಾರ್ಡಿನಿಂದ ವಿಜೇತರಾದ ಶಂಸೀದಾಫಿರೋಸ್ ಕನ್ನಡದಲ್ಲಿ ಅಲ್ಲಾಹುವಿನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಕಾಸರಗೋಡು ನಗರಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಭಾರ ಮಹಾಪ್ರಬಂಧಕ ಕೆ. ಸಜಿತ್‍ಕುಮಾರ್ ಪ್ರಮಾಣವಚನ ಬೋಧಿಸಿದರು.