HEALTH TIPS

ಸ್ಥಳೀಯಾಡಳಿತ ಚುನಾವಣೆ-ಅಂತಿಮ ಹಂತ- ಜಿಲ್ಲೆಗಳಲ್ಲಿನ ಈ ಕೋವಿಡ್ ಅಂಕಿಅಂಶಗಳು ಗಮನಾರ್ಹವಾಗಿವೆ

                       

        ತಿರುವನಂತಪುರ:ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೂರನೇ ಹಾಗೂ ಕೊನೆಯ ಹಂತದ ಮತದಾನ ಪ್ರಕ್ರಿಯೆಗಳು ಇಂದು ರಾಜ್ಯದಲ್ಲಿ ನಡೆಯಲಿದೆ. ಚುನಾವಣೆಯ ನಂತರ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವಾಗಲಿದೆ ಎಂದು ಆರೋಗ್ಯ ಸಚಿವರು ಎಚ್ಚರಿಸಿದ್ದಾರೆ. ಪ್ರಸ್ತುತ, ರಾಜ್ಯದಲ್ಲಿ 59,438 ಸಕ್ರಿಯ ಪ್ರಕರಣಗಳಿವೆ. ಸಕಾರಾತ್ಮಕ ಪ್ರಕರಣಗಳಿಗಿಂತ ಹೆಚ್ಚು ಋಉಣಾತ್ಮಕ ಪ್ರಕರಣಗಳು ನಿನ್ನೆ ವರದಿಯಾಗಿದೆ. ನಿನ್ನೆ 4698 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 5258 ಜನರನ್ನು ಗುಣಪಡಿಸಲಾಗಿದೆ. 

            ನಿನ್ನೆ 1680 ಜನರು ಆಸ್ಪತ್ರೆಗೆ ದಾಖಲು: 

    ಕೋವಿಡ್ ರೋಗಲಕ್ಷಣಗಳೊಂದಿಗೆ ಪ್ರತಿದಿನ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಎರಡು ಸಾವಿರಕ್ಕಿಂತ ಕಡಿಮೆಯಿದ್ದರೂ, ಇದು ಅಷ್ಟೊಂದು ಆಶಾದಾಯಕ ಬೆಳವಣಿಗೆಯಲ್ಲ.  ಕಳೆದ 24 ಗಂಟೆಗಳಲ್ಲಿ, 1680 ಜನರನ್ನು ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ, ವಿವಿಧ ಆಸ್ಪತ್ರೆಗಳಲ್ಲಿ 13,397 ಜನರನ್ನು ಕ್ವಾರಂಟೈನ್  ಮಾಡಲಾಗಿದೆ.  ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಮನೆ / ಸಾಂಸ್ಥಿಕ ಸಂಪರ್ಕತಡೆಯಲ್ಲಿ 3,03,150 ಜನರಿದ್ದಾರೆ. ಒಟ್ಟು 3,16,547 ಮಂದಿ ನಿರೀಕ್ಷಣೆಯಲ್ಲಿದ್ದಾರೆ.

           ಸಂಪರ್ಕ ಕಾರಣ ಸೋಂಕು ತಗಲುವುದು ಕಡಿಮೆಯಾಗುತ್ತಿಲ್ಲ:

     ಪ್ರಸ್ತುತ ರಾಜ್ಯದಲ್ಲಿ ವರದಿಯಾಗಿರುವ ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಿನವು ಸಂಪರ್ಕದ ಮೂಲಕ ಎನ್ನುವುದು ಕಳವಳಕಾರಿ. ಜೊತೆಗೆ ಸೋಂಕು ಹರಡಿದ ಮೂಲದ ಬಗ್ಗೆ ಸ್ಪಷ್ಟತೆ ಇಲ್ಲದ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ನಿನ್ನೆಯ ವರದಿಯನ್ವಯ ಸೋಂಕು ಪತ್ತೆಯಾದವರಲ್ಲಿ 93 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4034 ಜನರಿಗೆ ಸೋಂಕು ತಗಲಿತು. 528 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.

              'ಈ ಜಿಲ್ಲೆಗಳು ಭಯದಿಂದ ಮುಕ್ತವಾಗಿವೆ':

     ರಾಜ್ಯದಲ್ಲಿ ಕೋವಿಡ್ ತೀವ್ರಗತಿಯ ಏರಿಕೆ ಹೆಚ್ಚಿನ ಆತಂಕಗಳನ್ನು ಹುಟ್ಟುಹಾಕಿದ್ದ ಅನೇಕ ಜಿಲ್ಲೆಗಳು ಈಗ ಆತಂಕದಿಂದ ಮುಕ್ತವಾಗಿವೆ.ಈ ಪೈಕಿ ಕಾಸರಗೋಡು ತೀವ್ರ ಆತಂಕ ಮೂಡಿಸಿದ್ದ ಜಿಲ್ಲೆಯಾಗಿದ್ದು, ಮೊದಲ ಹಂತದಲ್ಲಿ ತೀವ್ರಗತಿಯ ಹರಡುವಿಕೆಯ ಭಯವಿತ್ತು. ಆದರೆ ಇಲ್ಲಿಯವರೆಗೆ ಕೋವಿಡ್ ಪ್ರಕರಣಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ನಿನ್ನೆ ಕಾಸರಗೋಡು ಜಿಲ್ಲೆಯಲ್ಲಿ  ಕೇವಲ 74 ಪ್ರಕರಣಗಳನ್ನು ಖಚಿತಪಡಿಸಲಾಗಿದೆ. ಪ್ರಸ್ತುತ, ಕಾಸರಗೋಡಿನ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್‍ನಿಂದ ಬಳಲುತ್ತಿರುವ ಒಟ್ಟು  1013 ಮಂದಿ ಸೋಂಕಿತರಿದ್ದಾರೆ. ಅಲ್ಲದೆ 1973 ಜನರು ವಯನಾಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ 2 ಸಾವಿರಕ್ಕಿಂತ ಕಡಿಮೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಎರಡು ಜಿಲ್ಲೆಗಳು ಇವು.

                  ಕಾಳಜಿಯ ನಾಲ್ಕು ಜಿಲ್ಲೆಗಳು:

     ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಪ್ರಸ್ತುತ 6,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳಿವೆ. ಅವುಗಳೆಂದರೆ ಎರ್ನಾಕುಳಂ, ತ್ರಿಶೂರ್, ಕೋಝಿಕ್ಕೋಡ್ ಮತ್ತು ಮಲಪ್ಪುರಂ. ಎರ್ನಾಕುಳಂನಲ್ಲಿ ನಿನ್ನೆ 509 ಜನರಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 804 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ, ಇಲ್ಲಿ 7823 ಜನರು ಕೋವಿಡ್ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ತ್ರಿಶೂರ್‍ನಲ್ಲಿ ನಿನ್ನೆ 438 ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯ ರೋಗಿಗಳ ಸಂಖ್ಯೆ 6060 ಆಗಿದೆ. ಪ್ರಸ್ತುತ 6801 ಜನರು ಕೋಝಿಕ್ಕೋಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಝೀಕ್ಕೋಡ್ ನಲ್ಲಿ 612 ಜನರಿಗೆ ಸೋಂಕು ತಗಲಿತು. ನಿನ್ನೆ ಮಲಪ್ಪುರಂನಲ್ಲಿ   ್ತ ರೋಗಿಗಳ ಸಂಖ್ಯೆ 6910 ಆಗಿದೆ. ಇದೇ ವೇಳೆ ಕಳೆದ ವಾರದ ಅಂಕಿ ಅಂಶಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ ಕಾಣುತ್ತಿರುವುದು ಧೈರ್ಯ ತುಂಬಿದೆ.

               ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ:

     ಆರೋಗ್ಯ ಇಲಾಖೆಯ ಪ್ರಕಾರ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 59,438 ಜನರಿಗೆ ಕೋವಿಡ್ ರೋಗನಿರ್ಣಯ ಮಾಡಲಾಗಿದೆ. ಎರ್ನಾಕುಳಂನಲ್ಲಿ ಅತಿ ಹೆಚ್ಚು ರೋಗಿಗಳ ಸಂಖ್ಯೆ 7823 ಇದೆ. ತಿರುವನಂತಪುರ 3208, ಕೊಲ್ಲಂ 3429, ಪತ್ತನಂತಿಟ್ಟು 2941, ಆಲಪ್ಪುಳ 3627, ಕೊಟ್ಟಾಯಂ 5273, ಇಡುಕಿ 2723, ತ್ರಿಶೂರ್ 6060, ಪಾಲಕ್ಕಾಡ್ 4259, ಮಲಪ್ಪುರಂ 6910, ಕೋಝಿಕ್ಕೋಡ್ 6801, ವಯನಾಡ್ 1973, ಕಣ್ಣೂರು 3398, ಕಾಸರಗೋಡು 1013 ಮಂದಿ ಚಿಕಿತ್ಸೆಯಲ್ಲೊದ್ದಾರೆ.

                 ಅಂತಿಮ ಸುತ್ತಿನ ಮತದಾನ:

    ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ 354 ಸ್ಥಳೀಯ ಸಂಸ್ಥೆಗಳ 6867 ವಾರ್ಡ್‍ಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ಅಂತಿಮ ಸುತ್ತಿನಲ್ಲಿ 42,87,597 ಪುರುಷರು, 46,87,310 ಮಹಿಳೆಯರು ಮತ್ತು 86 ವಿಶಿಷ್ಟ ಲಿಂಗಿಗಳು ಸೇರಿದಂತೆ 89,74,993 ಮತದಾರರಿದ್ದಾರೆ. ಇದರಲ್ಲಿ 71,906 ಯುವ  ಮತದಾರರು ಮತ್ತು 1,747 ಎನ್‍ಆರ್‍ಐ ಮತದಾರರು ಸೇರಿದ್ದಾರೆ. 10,842 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,105 ಅತಿ ಸೂಕ್ಷ್ಮ ಮತದಾನ ಕೇಂದ್ರಗಳಲ್ಲಿ ವೆಬ್‍ಕಾಸ್ಟಿಂಗ್ ಅನ್ನು ಅಳವಡಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries