ಕಾಸರಗೋಡು/ಬಾದಾರ : ಕೂಡ್ಲು ಸಮೀಪದ ಬಾದಾರ ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಉತ್ಸವವು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿವರ್ಯರ ಮಾರ್ಗದರ್ಶನದಲ್ಲಿ ಅರ್ಚಕರಾದ ಸುಬ್ರಾಯ ಕಾರಂತ, ಸಹಾಯಕ ಅರ್ಚಕರಾದ ಗೋಪಾಲಕೃಷ್ಣಕಾರಂತರ ಸಹಕಾರದೊಂದಿಗೆ ಸಂಭ್ರಮದೊಂದಿಗೆ ಜರಗಿತು.
ಬ್ರಹ್ಮವಾಹಕರಾಗಿ ಕೃಷ್ಣಪ್ರಸಾದ್ ಮುಟ್ಟತ್ತೋಡಿ, ಪರಿಚಾರಕರಾಗಿ ಸೂರ್ಯನಾರಾಯಣ ಕಾರಂತ ಮತ್ತು ಶ್ರೀಕೃಷ್ಣ ಅಡಿಗ ಸಹಕರಿಸಿದರು. ದಶಂಬರ್ 19 ರಂದು ಸಾಮೂಹಿಕ ನಾಗತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ದಶಂಬರ 20 ರಂದು ಬೆಳಗ್ಗೆ ಗಣಪತಿಹವನ ಕಲಶ ಪೂಜೆ, ಕಲಶಾಭಿಷೇಕ ಮಹಾಪೂಜೆ, ಶ್ರೀನಾಗ ಸನ್ನಿದಿ ಹಾಗು ರಕ್ತೇಶ್ವರಿ ಗುಳಿಗ ಸನ್ನಿಧಿüಯಲ್ಲಿ ತಂಬಿಲ ಮತ್ತು ಪೂಜೆ ಪ್ರಸಾದ ವಿತರಣೆ ಜರಗಿತು. ಸಂಜೆ ಶೇಷವನ ಭಕ್ತವೃಂದದವರಿಂದ ಭಜನೆ, ರಾತ್ರಿ ಪೂಜೆ ಶ್ರೀಭೂತಬಲಿ, ದರ್ಶನಬಲಿ, ಬಟ್ಟಲುಕಾಣಿಕೆ ರಾಜಾಂಗಣ ಪ್ರಸಾದ ಜರಗಿತು. ಪೂರ್ತಿಕಾರ್ಯಕ್ರಮ ಕೋವಿಡ್ ಮಾನದಂಡಗಳನ್ನು ಪಾಲಿಸಿ ನಡೆಸಲಾಯಿತು. ಅನುವಂಶಿಕ ಮೊಕ್ತೇಸರ ಸದಾಶಿವ, ಆಡಳಿತ ಮೊಕ್ತೇಸರ ಕಿರಣ್ ಪ್ರಸಾದ್ ಕೂಡ್ಲು, ಕಾರ್ಯದರ್ಶಿ ವಸಂತ ನಾಂಗುರಿ ಕೋಶಾಧಿಕಾರಿ ಸುರೇಶ್ ನಾಯ್ಕ್ , ಹಾಗು ಟ್ರಸ್ಟಿಗಳು, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಸಂಘ, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.