ನವದೆಹಲಿ: ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ ಉತ್ತಮ ಸೇವೆ ನೀಡಿದ 10 ಪೆÇಲೀಸ್ ಠಾಣೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ. ಮಣಿಪುರದ ಥೌಬಲ್ ಜಿಲ್ಲೆಯ ನಾಂಗ್‍ಪೆÇೀಕ್ ಸೆಕ್ಮೈ ಇಡೀ ದೇಶದಲ್ಲೇ ಉತ್ತಮ ಸೇವೆ ಒದಗಿಸುವ ಪೆÇಲೀಸ್ ಠಾಣೆ ಎಂಬ ಖ್ಯಾತಿ ಪಡೆದರೆ, ತೆಲಂಗಾಣದ ಜಮ್ಮಿಕುಂಟಾ ಪೆÇಲೀಸ್ ಠಾಣೆ 10ನೇ ಸ್ಥಾನದಲ್ಲಿದೆ.
ಆರೋಗ್ಯಕಾರಿ ಸ್ಪರ್ಧಿ ಮತ್ತು ಹೆಚ್ಚು ಪರಿಣಾಕಾರಿ ಕಾರ್ಯಚಟುವಟಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಪ್ರತಿ ವರ್ಷ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಪೆÇಲೀಸ್ ಠಾಣೆಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡುತ್ತದೆ.
ದೇಶದ ಒಟ್ಟು 16,671 ಪೆÇಲೀಸ್ ಠಾಣೆಗಳ ಕಾರ್ಯಕ್ಷಮತೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಈ ಪೈಕಿ 10 ಅತ್ಯುತ್ತಮ ಪೆÇಲೀಸ್ ಠಾಣೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರ ಪ್ರಕಟಿಸಿರುವ ದೇಶದ ಟಾಪ್ 10 ಪೆÇಲೀಸ್ ಠಾಣೆಗಳ ಪಟ್ಟಿ ಇಂತಿದೆ.
* ಮಣಿಪುರ ಥೌಬಲ್ ಜಿಲ್ಲೆಯ ನಾಂಗ್‍ಪೆÇೀಕ್ ಸೆಕ್ಮೈ
* ತಮಿಳುನಾಡಿನ ಸೇಲಂ ಜಿಲ್ಲೆಯ ಎಡಬ್ಲ್ಯೂಪಿಎಸ್- ಸುರಮಂಗಲಂ
* ಅರುಣಾಚಲ ಪ್ರದೇಶ ಚಾಂಗ್ಲಾಂಗ್ ಜಿಲ್ಲೆಯ ಖಸಾರ್ಂಗ್
* ಛತ್ತೀಸ್ ಗಢದ ಬಯ್ಯಾ ಥಾನಾದ ಜಿಲ್ಮಿಲಿ
* ಗೋವಾ ರಾಜ್ಯದ ಸಾಂಗುಮ್
*ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕಾಲಿಘಾಟ್
*ಸಿಕ್ಕಿಂನ ಪಾಕ್ಯಾಂಗ್
* ಉತ್ತರ ಪ್ರದೇಶ ರಾಜ್ಯ ಮೊರಾದಬಾದ್ ಜಿಲ್ಲೆಯ ಕಾಂತ್
* ದಾದ್ರಾ ಮತ್ತು ನಗರ್ ಹವೇಲಿಯ ಖಾನ್ವೆಲ್
* ತೆಲಂಗಾಣದ ಕರೀಂನಗರ ಜಿಲ್ಲೆಯ ಜಮ್ಮಿಕುಂಟಾ
ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ 10 ಉತ್ತಮ ಪೆÇಲೀಸ್ ಠಾಣೆಗಳ ಪಟ್ಟಿಯಲ್ಲಿ ಕೇರಳದ ಯಾವ ಪೆÇಲೀಸ್ ಠಾಣೆಯೂ ಸ್ಥಾನಗಳಿಸಿಲ್ಲ.