ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ.ಅಧ್ಯಕ್ಷರಾಗಿ ಶ್ರೀಧರ ಎಂ.ಹಾಗೂ ಉಪಾಧ್ಯಕ್ಷರಾಗಿ ಗೀತಾ ಕೆ.ಆಯ್ಕೆಯಾಗಿದ್ದಾರೆ.
ಒಟ್ಟು 13 ವಾರ್ಡ್ ಗಳಿರುವ ಬೆಳ್ಳೂರು ಪಂಚಾಯಿತಿಯಲ್ಲಿ ಬಿಜೆಪಿ 8 ವಾರ್ಡ್ ಗಳಲ್ಲಿ ಜಯಗಳಿಸಿ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೇರಿದೆ.ಎಲ್ ಡಿಎಫ್ 3 ವಾರ್ಡ್ ಗಳಲ್ಲಿ ಜಯಗಳಿಸಿದೆ.12 ವಾರ್ಡ್ ಗಳಲ್ಲಿ ಸ್ಪರ್ಧಿಸಿದ ಯುಡಿಎಫ್ ಯಾವುದೇ ವಾರ್ಡ್ ಗಳಲ್ಲಿ ಜಯಗಳಿಸಿಲ್ಲ.
ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಧರ ಎಂ. ಪಂಚಾಯಿತಿಯ 9ನೇ ವಾರ್ಡ್ ಬೆಳ್ಳೂರಿನಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು.2015-20 ಅವಧಿಯಲ್ಲಿ ಬ್ಲಾಕ್ ಪಂಚಾಯಿತಿ ಸದಸ್ಯರಾಗಿದ್ದರು. ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಗೀತಾ ಕೆ. 6ನೇ ವಾರ್ಡ್ ಕಕ್ಕೆಬೆಟ್ಟುವಿನಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು.ಈ ಹಿಂದಿನ ಬೆಳ್ಳೂರು ಪಂಚಾಯಿತಿ ಆಡಳಿತ ಸಮಿತಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದರು.
ಚುನಾವಣಾ ಅಧಿಕಾರಿ ಅನೂಪ್ ಅಧ್ಯಕ್ಷರಿಗೆ ಹಾಗೂ ಅಧ್ಯಕ್ಷರು ಉಪಾಧ್ಯಕ್ಷರಿಗೆ ಪ್ರತಿಜ್ಞೆ ಬೋಧಿಸಿದರು.