ನವದೆಹಲಿ: ನೀಟ್ ಪರೀಕ್ಷೆಯನ್ನು ರದ್ದು ಪಡಿಸುವ ಯಾವುದೇ ಉದ್ದೇಶವಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೊಕ್ರಿಯಾಲ್ ಸ್ಪಷ್ಟಪಡಿಸಿದ್ದಾರೆ.
ನೀಟ್ ಪರೀಕ್ಷೆ ರದ್ದು ಪಡಿಸಲಾಗುತ್ತದೆ ಎಂಬುದು ಕೇವಲ ಸುಳ್ಳು ವದಂತಿ ಯಾವುದೇ ಕಾರಣಕ್ಕೂ ನೀಟ್ ಪರೀಕ್ಷೆ ರದ್ದಾಗುವುದಿಲ್ಲ ಎಂದು ಸಚಿವರು ಹೇಳಿದರು.
ದೆಹಲಿಯಲ್ಲಿ ತಜ್ಞರೊಂದಿಗೆ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೊರೋನ ಸಂಕಷ್ಟದಿಂದ ಮುಂದೂಡಿದ್ದ ಸಿಬಿಎಸ್ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳು ಮುಂದಿನ ವರ್ಷ 2021ರಲ್ಲಿ ನಡೆಸಲಾಗುವುದು ಎಂದ ಸಚಿವರು, ವಿದ್ಯಾರ್ಥಿಗಳು ಯಾವುದೇ ಗಲಿಬಿಲಿ, ಅತಂತಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು .
ಪರೀಕ್ಷಾ ದಿನಾಂಕ ಘೋಷಣೆಗೂ ಮೊದಲು ಪರೀಕ್ಷಾ ಸಿದ್ಧತೆಗಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ಕಾಲಾವಕಾಶ ನೀಡಲಾಗುವುದು ಸಚಿವರು ಅಭಯ ನೀಡಿದರು.
Interacting with teachers, parents and students on upcoming competitive/board exams. #EducationMinisterGoesLive @EduMinOfIndia @SanjayDhotreMP @PIB_India @MIB_India@DDNewslive https://t.co/qOsUBJ2J30
ಸಿಬಿಎಸ್ ಇ ಬೋರ್ಡ್ ಪರೀಕ್ಷೆ, ಜೆಇಇ ಮತ್ತು ನೀಟ್ 2021 ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳು ಸಚಿವರು ಪ್ರಶ್ನಿಸಿದರು. ಜೆಇಇ, ನೀಟ್ 2021 ಮುಖ್ಯ ಪರೀಕ್ಷೆ ಸೇರಿದಂತೆ ಇನ್ನಿತರ ಪ್ರವೇಶ ಪರೀಕ್ಷೆಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು.