HEALTH TIPS

ಶಿಗೆಲ್ಲಾ ಖಾಯಿಲೆ: ರೋಗ ಹೇಗೆ ಹರಡಿತು?-ಹಠಾತ್ ಉಲ್ಬಣ

        ಕೋಝಿಕ್ಕೋಡ್: ಕೋಝಿಕ್ಕೋಡ್ ಜಿಲ್ಲೆಯಲ್ಲಿ ಹಠಾತ್ ಕಾಣಿಸಿಕೊಂಡ ಬ್ಯಾಕ್ಟೀರಿಯಲ್ ಸೋಂಕಾಗಿರುವ ಶಿಗೆಲ್ಲಾ ಕ್ಕೆ  ಕೊಟ್ಟಂಪರಂಬಿಲ್‍ನ 11 ವರ್ಷದ ಮಗು ಸಾವನ್ನಪ್ಪಿದ ಬಳಿಕ ಆರೋಗ್ಯ ಇಲಾಖೆ ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.

         ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಶಿಗೆಲ್ಲ ಹರಡುವಿಕೆ ಹೆಚ್ಚುತ್ತಿದೆ. ಕೋಝಿಕ್ಕೋಡ್ ಕಾಪೆರ್Çರೇಶನ್‍ನ 18 ನೇ ವಿಭಾಗದ ಕೊಟ್ಟಂಪರಂಬು ಮುಂಡಿಕಲ್ತಾ ಎಂಬ  ಪ್ರದೇಶದಲ್ಲಿ ಶಿಗೆಲ್ಲಾ ದೃಢಪಟ್ಟಿದೆ. ರೋಗದ ಹರಡುವಿಕೆಯ ಬಗ್ಗೆ ಸ್ಪಷ್ಟವಾದ ದೃಢೀಕರಣವಿಲ್ಲದಿದ್ದರೂ, ಪ್ರಾಥಮಿಕ ಅಧ್ಯಯನವು ರೋಗದ ಹರಡುವಿಕೆಯು ಕಲುಶಿತ ನೀರಿನ ಮೂಲಕ ಎಂದು ಗುರುತಿಸಿದೆ.  ಪ್ರಾಥಮಿಕ ವರದಿಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಸಮುದಾಯ ಔಷಧ ವಿಭಾಗವು ಸಲ್ಲಿಸಿದೆ.

            ತೀವ್ರ ಎಚ್ಚರಿಕೆ:

      ಕೋಝಿಕ್ಕೋಡ್ ನ ಕೊಟ್ಟಂಪರಂಬಿಲ್‍ನಲ್ಲಿ ಕಂಡುಬಂದ ಶಿಗೆಲ್ಲಾದಿಂದ 11 ವರ್ಷದ ಮಗು ಸಾವನ್ನಪ್ಪಿದ ಬಳಿಕ ಆರೋಗ್ಯ ಇಲಾಖೆ ಈ ಪ್ರದೇಶದಲ್ಲಿ ತೀವ್ರ ಜಾಗರೂಕತೆ ಘೋಷಿಸಿದೆ. ಪ್ರದೇಶದ 120 ಬಾವಿಗಳಲ್ಲಿ ಸೂಪರ್ ಕ್ಲೋರಿನೀಕರಣವನ್ನು ನಡೆಸಲಾಯಿತು. ಕಡಲುಂಡಿ, ಫೆರೂಕ್, ಪೆರುವಾಯಲ್ ಮತ್ತು ವಾಜೂರ್ ಪ್ರದೇಶಗಳಲ್ಲಿಯೂ ಶಿಗೆಲ್ಲಾ ಪ್ರಕರಣಗಳು ವರದಿಯಾಗಿವೆ. ಈ ಎಲ್ಲಾ ಸ್ಥಳಗಳಲ್ಲಿ ಸತತವಾಗಿ ಒಂದು ವಾರ ಆರೋಗ್ಯ. ಕಾರ್ಯಕರ್ತರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುವುದು.

               ನೀರಿನ ಮೂಲಕ ರೋಗ ಹರಡುವುದು:

     ಶಿಗೆಲ್ಲಾ ನೀರಿನ ಮೂಲಕ ಹರಡಿತು ಎಂದು ಪ್ರಾಥಮಿಕ ಅಧ್ಯಯನಗಳು ವರದಿ ಮಾಡಿವೆ. ಪ್ರಾಥಮಿಕ ವರದಿಯನ್ನು ಕೋಝಿಕೋಡ್ ವೈದ್ಯಕೀಯ ಕಾಲೇಜಿನ ಸಮುದಾಯ ಔಷಧ ವಿಭಾಗವು ಸಲ್ಲಿಸಿದೆ. ರೋಗಕಾರಕ ಬ್ಯಾಕ್ಟೀರಿಯಾವನ್ನು ಮಾನವ ಮಲದಿಂದ ನೀರಿಗೆ ಹರಡುತ್ತಿರುವುದಾಗಿ ಗುರುತಿಸಲಾಗಿದೆ. ಆದ್ದರಿಂದ ವೈಯಕ್ತಿಕ ನೈರ್ಮಲ್ಯ ಮುಖ್ಯ ಎಂದು ಬೊಟ್ಟುಮಾಡಲಾಗಿದೆ.

                   ಮಕ್ಕಳ ಮೇಲೆ ತೀವ್ರ ಪರಿಣಾಮ: 

      ವಯಸ್ಕರಿಗಿಂತ ಶಿಗೆಲ್ಲಾ ಖಾಯಿಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯನ್ನು ಪತ್ತೆಹಚ್ಚಲಾಗಿದೆ. ಸೋಂಕಿತ ಜನರ ಸಂಪರ್ಕದ ಮೂಲಕ ಶಿಗೆಲ್ಲಾ ಬಹಳ ಬೇಗನೆ ಹರಡಬಹುದು. ಮುಖ್ಯ ಲಕ್ಷಣಗಳು ವಾಂತಿ, ಜ್ವರ, ಅತಿಸಾರ ಮತ್ತು ಮಲದಲ್ಲಿ ರಕ್ತ. ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆಯನ್ನು ಪಡೆಯಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

                 ಲಕ್ಷಣಗಳು:

     ಅತಿಸಾರ, ಜ್ವರ, ಹೊಟ್ಟೆ ನೋವು, ವಾಂತಿ, ಆಯಾಸ ಮತ್ತು ರಕ್ತಸಿಕ್ತ ಮಲ ಇವು ಶಿಗೆಲ್ಲಾದ ಮುಖ್ಯ ಲಕ್ಷಣಗಳಾಗಿವೆ. ರೋಗವು ಮುಖ್ಯವಾಗಿ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ತತ್ಪಲವಾಗಿ ಮಲ ಜೊತೆಗೆ ರಕ್ತವೂ ಕಂಡುಬರುತ್ತದೆ. ರೋಗಿಯ ಮಲವಿಸರ್ಜನೆಯೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದಿಂದ ಈ ರೋಗವು ಸುಲಭವಾಗಿ ಹರಡುತ್ತದೆ. ರೋಗಲಕ್ಷಣಗಳು ಎರಡರಿಂದ ಏಳು ದಿನಗಳವರೆಗೆ ಇರುತ್ತದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries