ಕಣ್ಣೂರು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಅವಮಾನಿಸಿದ್ದಕ್ಕಾಗಿ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಿಯೋರ್ವನನ್ನು ವೃತ್ತಿಯಿಂದ ವಜಾ ಮಾಡಲಾಗಿದೆ. ಅಗ್ನಿಶಾಮಕ ಇಲಾಖೆಯ ಸಹಾಯಕ ವ್ಯವಸ್ಥಾಪಕ ಕೆ.ಎಲ್.ರಮೇಶ್ ಅವರನ್ನು ವಜಾ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ಮುಖ್ಯಮಂತ್ರಿ ಮತ್ತು ಇತರ ಜನ ಪ್ರತಿನಿಧಿಗಳನ್ನು ಅವಮಾನಿಸಿದ್ದಕ್ಕಾಗಿ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧ್ಯಕ್ಷರಾಗಿರುವ ರಮೇಶ್ ಅವರನ್ನು ತೆಗೆದುಹಾಕಲು ಕಿಯಾಲ್ ಎಂಡಿ(ವ್ಯವಸ್ಥಾಪಕ ಸಮಿತಿ) ಆದೇಶಿಸಿದ್ದಾರೆ.
ತಿರುವನಂತಪುರಂನ ಪದ್ಮನಾಭ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ರಮೇಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮುಖ್ಯಮಂತ್ರಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದರು. ಈ ಬಗ್ಗೆ ಕಿಯಾಲ್‍ಗೆ ದೂರು ಬಂದಿತ್ತು.
ಕಿಯಾಲ್ ಕಳೆದ ವರ್ಷ ನವೆಂಬರ್ 23 ರಂದು ರಮೇಶ್ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಆದರೆ ಉತ್ತರ ತೃಪ್ತಿಕರವಾಗಿರದ ಹಿನ್ನೆಲೆಯಲ್ಲಿ ರಮೇಶ್ ಅವರನ್ನು ಸೇವೆಯಿಂದ ವಯಾ ಮಾಡುವಂತೆ ಕಿಯಾಲ್ ಎಂಡಿ ನಿರ್ದೇಶನ ನೀಡಿರುವರು.
ಇದೇ ವೇಳೆ, ವಿಮಾನ ನಿಲ್ದಾಣದ ನಿರ್ವಹಣೆಯ ತಪ್ಪುಗಳ ಬಗ್ಗೆ ಆಡಳಿತ ಮಂಡಳಿಗೆ ಪ್ರತಿಕ್ರಿಯಿಸಿದ್ದಕ್ಕಾಗಿ ತನ್ನನ್ನು ವಜಾ ಮಾಡಲಾಗಿದೆ ಎಂದು ಕೆ.ಎಲ್.ರಮೇಶ್ ಆರೋಪಿಸಿರುವರು. ಮುಖ್ಯಮಂತ್ರಿ ಮತ್ತು ಇತರರ ವಿರುದ್ಧ ರಮೇಶ್ ಅವರ ಅವಮಾನಕರ ಟೀಕೆಗಳ ಸ್ಕ್ರೀನ್ ಶಾಟ್‍ಗಳನ್ನು ಬಿಡುಗಡೆ ಮಾಡಲಾಗಿತ್ತು.