ಕಾಸರಗೋಡು: ರಾಷ್ಟ್ರೀಯ ಯುವ ಉತ್ಸವದ ಹಿನ್ನೆಲೆಯಲ್ಲಿ ಯುವ ಸೇವಾ ಮತ್ತು ಕ್ರೀಡಾ ಸಚಿವಾಲಯವು ನೆಹರೂ ಯುವ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸಹಯೋಗದೊಂದಿಗೆ ಆಯೋಜಿಸಿರುವ ರಾಷ್ಟ್ರೀಯ ಯುವ ಸಂಸತ್ತಿನಲ್ಲಿ ಭಾಗವಹಿಸಲು ಅವಕಾಶವನ್ನು ನೀಡಿದೆ.
ಪ್ರಾಥಮಿಕ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಯುವ ಸಂಸತ್ತು 2020 ರ ನವೆಂಬರ್ 30 ಪೂರ್ತಿಗೊಳ್ಳುವ 18-25 ವರ್ಷದ ಯುವಕರಿಗೆ ಮುಕ್ತವಾಗಲಿದೆ. ಭಾಗವಹಿಸುವವರು ನಿರ್ದಿಷ್ಟ ವಿಷಯದ ಕುರಿತು ನಾಲ್ಕು ನಿಮಿಷಗಳಿಗಿಂತ ಹೆಚ್ಚಾಗದಂತೆ ಭಾಷಣಗೈಯ್ಯಬೇಕು. ಕೋವಿಡ್ ಸಂದರ್ಭದಲ್ಲಿ ಸ್ಪರ್ಧೆಯು ಆನ್‍ಲೈನ್ ಮೋಡ್‍ನಲ್ಲಿರುತ್ತದೆ. ವಿಷಯವನ್ನು ನಂತರ ಸ್ಪರ್ಧಿಗಳಿಗೆ ನೀಡಲಾಗುವುದು. ಹಿಂದಿ, ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಆದರೆ ರಾಷ್ಟ್ರೀಯ ಸ್ಪರ್ಧೆ ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಮಾತ್ರ ಇರುತ್ತದೆ. ಜಿಲ್ಲಾ ಮಟ್ಟದ ಸ್ಪರ್ಧೆಯಿಂದ ಆಯ್ಕೆಯಾದ ಇಬ್ಬರು ನ್ಯಾಯಾಧೀಶರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವರು. ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಸಂಸತ್ತಿನಲ್ಲಿ ಭಾಗವಹಿಸಲು ರಾಜ್ಯಮಟ್ಟದ ಸ್ಪರ್ಧೆಯ ವಿಜೇತರು ಅರ್ಹರಾಗಿರುತ್ತಾರೆ. ರಾಷ್ಟ್ರೀಯ ಸ್ಪರ್ಧೆಯ ಮೊದಲ ಮೂರು ವಿಜೇತರಿಗೆ ಕ್ರಮವಾಗಿ 2 ಲಕ್ಷ, 1.5 ಲಕ್ಷ ಮತ್ತು 1 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಭಾಗವಹಿಸಲು ಆಸಕ್ತಿ ಇರುವವರು ತಮ್ಮ ಹೆಸರುಗಳನ್ನು ಆಯಾ ಜಿಲ್ಲೆಗಳ ನೆಹರೂ ಯುವ ಕೇಂದ್ರ ಕಚೇರಿಯಲ್ಲಿ ಡಿಸೆಂಬರ್ 27 ರೊಳಗೆ ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ ಫೆÇೀನ್ ಸಂಖ್ಯೆ-9539579179