ನೀಲಂಬೂರು:ಶಾಸಕ ಪಿ.ವಿ.ಅನ್ವರ್ ಮಧ್ಯರಾತ್ರಿ ವೇಳೆ ಬುಡಕಟ್ಟು ಕಾಲನಿಯೊಂದಕ್ಕೆ ದಿಢೀರ್ ತಲುಪಿದಾಗ ಸ್ಥಳೀಯರು ತಡೆದ ಘಟನೆ ನಡೆದಿದೆ. ದುರುದ್ದೇಶಪೂರಿತರಾಗಿ ಅವೇಳೆಯಲ್ಲಿ ಶಾಸಕರು ಆಗಮಿಸಿದ್ದರು ಎಂದು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಲಪ್ಪುರಂ ನಿಲಂಬೂರ್ ಮುಂಡೇರಿ ಅಪ್ಪಂಕಪ್ ಕಾಲೋನಿಗೆ ಶುಕ್ರವಾರ ತಡರಾತ್ರಿ ಶಾಸಕ ಪಿ.ವಿ. ಅನ್ವರ್ ಹಠಾತ್ ಅಗಮಿಸಿದಾಗ ಸ್ಥಳೀಯರು ತಡೆ ಹಿಡಿದರು.ಈ ವೇಳೆ ಘರ್ಷಣೆಗಳು ಭುಗಿಲೆದ್ದವು. ಶಾಸಕರನ್ನು ನಿರ್ಬಂಧಿಸಿದ ಬೆನ್ನಗೆ ಎಲ್ಡಿಎಫ್ ಹಾಗೂ ಯುಡಿಎಫ್ ಕಾರ್ಯಕರ್ತರು ಜಮೆಯಾಗುವುದರೊಂದಿಗೆ ಘರ್ಷಣೆ ಆರಂಭಗೊಂಡಿತು.
ಶಾಸಕರು ನಿನ್ನೆ ರಾತ್ರಿ 11 ಸುಮಾರಿಗೆ ಕಾಲನಿಗೆ ಆಗಮಿಸಿದರು. ಈ ಸಂದರ್ಭ, ಯುಡಿಎಫ್ ಕಾರ್ಯಕರ್ತರು ಶಾಸಕರಲ್ಲಿ ಈವೇಳೆ ಏಕೆ ಬಂದಿರುವಿರಿ ಎಂದು ಕೇಳಿದರು. ಇದು ಅಲ್ಪ ಪ್ರಮಾಣದ ಸಂಘರ್ಷಕ್ಕೆ ಕಾರಣವಾಯಿತು.
ನಂತರ, ಎಲ್ಡಿಎಫ್ ಕಾರ್ಯಕರ್ತರ ಆಗಮನದೊಂದಿಗೆ, ಪರಿಸ್ಥಿತಿ ದೊಡ್ಡ ಸಂಘರ್ಷಕ್ಕೆ ಕಾರಣವಾಯಿತು. ಏತನ್ಮಧ್ಯೆ, ಶಾಸಕರು ಸ್ವತಃ ಪೊಲೀಸರನ್ನು ಕರೆಸಿದರು. ಶಾಸಕರ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿರುವ ಯುಡಿಎಫ್ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಶಾಸಕ ಪಿವಿ ಅನ್ವರ್ ಹಾಗೂ ಅವರ ಗೂಂಡಾಗಳು ಈ ದಾಳಿಯ ಹಿಂದೆ ಇದ್ದಾರೆ ಮತ್ತು ದೈಹಿಕವಾಗಿ ಹಲ್ಲೆಗೊಳಿಸುವ ಮೂಲಕ ಕಮ್ಯುನಿಸ್ಟ್ ರಾಜಕೀಯವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಎಡರಂಗ ಆರೋಪಿಸಿತು.
ಪಿ.ವಿ.ಅನ್ವರ್ ಮಾತನಾಡಿ "ಇದು ಆರ್ಯಾಡನ್ ನ ಎಲ್ಲಾ ವಂಚನೆಗಳಿಂದ ಸಂಕಷ್ಟದಲ್ಲಿ ತೊಳಲಾಡುವ ಪ್ರದೇಶವಾಗಿದೆ. ಮುಂಡೇರಿಯವರಿಗೆ ಅದು ತಿಳಿದಿಲ್ಲ. ಆರ್ಯಡನ್ ಗೂಂಡಾಗಳು ಮತ್ತು ಸಂಬಂಧಿತ ಚಟುವಟಿಕೆಗಳು ಮುಗಿದಿಲ್ಲ ಎಂಬುದಕ್ಕೆ ಈಗಿನ ಘಟನೆ ದೊಡ್ಡ ಪುರಾವೆಯಾಗಿದೆ. ನಾವು ನಮ್ಮ ಕೆಲಸವನ್ನು ಪೂರ್ಣಗೊಳಿಸುತ್ತೇವೆ" ಎಂದು ಹೇಳಿದರು.