ಕೊಚ್ಚಿ: ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್‍ಶೀಟ್ ಸಲ್ಲಿಸಿದೆ. ಶಿವಶಂಕರ್ ಬಂಧನಕ್ಕೊಳಗಾಗಿ 60 ದಿನಗಳ ಬಳಿಕ ಮಂಗಳವಾರ ಇಡಿ ನ್ಯಾಯಾಲಯದಲ್ಲಿ ಚಾರ್ಜ್‍ಶೀಟ್ ದಾಖಲಿಸಿತು. ಇದು ಸಾಮಾನ್ಯವಾದ ಜಾಮೀನು ಪಡೆಯುವ ಸಾಧ್ಯತೆ ಮಾರ್ಗವನ್ನು ಮುಚ್ಚಿದಂತಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ತಂಡ ಸಲ್ಲಿಸಿದ ಎರಡನೇ ಚಾರ್ಜ್‍ಶೀಟ್ ಇದಾಗಿದೆ. ಮೂರು ಭಾಗಗಳಲ್ಲಿ ಸಿದ್ಧಪಡಿಸಿದ ದೋಷಾರೋಪಣೆಯು ಸಾವಿರ ಪುಟಗಳಿಗಿಂತಲೂ ಹೆಚ್ಚು ವಿಸ್ಕøತವಾಗಿದೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಶಿವಶಂಕರ್ ಅವರ ಆಸ್ತಿಯನ್ನು ಪತ್ತೆಹಚ್ಚಲು ಜಾರಿ ನಿರ್ದೇಶನಾಲಯ ಮಂಗಳವಾರ ಆದೇಶಿಸಿತ್ತು. ಕಸ್ಟಮ್ಸ್, ಎನ್‍ಐಎ ಮತ್ತು ಇಡಿ ಚಿನ್ನ ಕಳ್ಳಸಾಗಣೆ ಪ್ರಕರಣದ ವಿವಿಧ ಅಂಶಗಳನ್ನು ತನಿಖೆ ನಡೆಸುತ್ತಿವೆ.
ಇಡಿಯ ಚಾರ್ಜ್‍ಶೀಟ್ ನ ವರದಿಯನುಸಾರ ಚಿನ್ನ ಕಳ್ಳಸಾಗಣೆಯ ಹಿಂದಿನ ಸೂತ್ರಧಾರ ಶಿವಶಂಕರ್ ಎಂಬುದು ನಿರ್ವಿವಾದ. ಶಿವಶಂಕರ್ ಅವರು ಸ್ವಪ್ನಾ, ಸರಿತ್ ಮತ್ತು ಸಂದೀಪ್ ಅವರಿಗೆ ಸಹಾಯ ಮಾಡಲು ಈ ಎಲ್ಲವನ್ನು ಮಾಡಿದ್ದರು. ಶಿವಶಂಕರ್ ಅವರ ಸ್ಪಷ್ಟ ಅರಿವಿನೊಂದಿಗೆ ಕಳ್ಳಸಾಗಣೆ ನಡೆಯಿತು. ಶಿವಶಂಕರ್ ಕಳ್ಳಸಾಗಣೆ ಮೂಲಕ ಅಪಾರ ಸಂಪತ್ತು ಗಳಿಸಿರುವರು. ಈ ಎಲ್ಲ ವ್ಯಹಾರದ ನಿರ್ವಹಣೆಗೆ ಶಿವಶಂಕರ್ ಸ್ವಪ್ನಾ ಅವರನ್ನು ನಿಯೋಜಿಸಿದ್ದರು ಎಂದು ದೋಷಾರೋಪಣೆಯಲ್ಲಿ ಬೊಟ್ಟುಮಾಡಲಾಗಿದೆ.