HEALTH TIPS

ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರ ನೂತನ ಭೋಜನ ಶಾಲೆ, ಸಭಾಭವನ ಕಟ್ಟಡ ಕಾಮಗಾರಿಗೆ ನಿಧಿ ಸಂಗ್ರಹ ಕಾರ್ಯಕ್ರಮ-ಭಕ್ತಿ ಹಾಗೂ ಭಾವುಕತೆಗೆ ಎಲ್ಲವನ್ನೂ ಸೆಳೆಯುವ ಶಕ್ತಿಯಿದೆ - ಮಾಣಿಲ ಶ್ರೀ

 

         ಬದಿಯಡ್ಕ: ಭಕ್ತಿ ಹಾಗೂ ಭಾವುಕತೆಗೆ ಎಲ್ಲವನ್ನೂ ಸೆಳೆಯುವ ಶಕ್ತಿಯಿದೆ. ವಿವಾಹ ಮೊದಲಾದ ಮಂಗಲಕಾರ್ಯಗಳು ಅಮಂಗಲವಾಗದೆ ಭಕ್ತಿ ಶ್ರದ್ಧೆಯಿಂದ ನಡೆಯಬೇಕಾಗಿದೆ. ಶುಭಕಾರ್ಯಗಳನ್ನು ನಮ್ಮ ದೇವಸ್ಥಾನ, ಮಂದಿರಗಳ ಸಭಾಭವನದಲ್ಲಿ ನಡೆಸುವುದರಿಂದ ಕೈಗೊಂಡ ಕಾರ್ಯವು ಸಫಲತೆಯನ್ನು ಕಾಣುತ್ತದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ನುಡಿದರು.

       ಭಾನುವಾರ ಸಂಜೆ ಅಗಲ್ಪಾಡಿ ಜಯನಗರ ಶ್ರೀಗೋಪಾಲಕೃಷ್ಣ ಭಜನ ಮಂದಿರದ ನಿರ್ಮಾಣ ಹಂತದಲ್ಲಿರುವ ನೂತನ ಭೋಜನ ಶಾಲೆ ಮತ್ತು ಸಭಾಭವನದ ಕಾಮಗಾರಿಯನ್ನು ವೀಕ್ಷಿಸಿ ಮಾರ್ಗದರ್ಶನವನ್ನು ನೀಡಿ, ಸಭಾಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ನೀಡಿದರು.

        ಹಿರಿಯರ ತಪಸ್ಸಿನ ಫಲವಾಗಿ ಇಂದು ಧಾರ್ಮಿಕ ಕ್ಷೇತ್ರಗಳು, ಮಂದಿರಗಳು ನಮ್ಮ ಮುಂದಿವೆ. ಮಂದಿರಗಳಲ್ಲಿ ಪ್ರವಚನ, ಸತ್ಸಂಗಗಳು ಸದಾ ನಡೆಯುತ್ತಿರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರವನ್ನು ನೀಡಿ ನಾಳಿನ ಸತ್ಪ್ರಜೆಗಳನ್ನಾಗಿ ರೂಪುಗೊಳ್ಳುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹಿತವಚನಗಳನ್ನು ನುಡಿದರು. 

ತಲೇಕ ಸುಬ್ರಹ್ಮಣ್ಯ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕುಂಞÂರಾಮ ಕೋಳಾರಿಯಡ್ಕ, ಕೆಡಿಸಿ ಬ್ಯಾಂಕ್ ನಿವೃತ್ತ ಪ್ರಬಂಧಕ ಕುಞ್ಞಣ್ಣ, ಧಾರ್ಮಿಕ ಮುಂದಾಳು ಶಂಕರನಾರಾಯಣ ಮಯ್ಯ ಬದಿಯಡ್ಕ, ಎ.ಜಿ.ಶರ್ಮ ಮಂಗಳೂರು, ಬಿಎಸ್‍ಎನ್‍ಎಲ್ ನಿವೃತ್ತ ಉದ್ಯೋಗಿ ಎಂ.ಕೆ.ಮಣಿಯಾಣಿ ಕಡಬ, ಎಂ.ಸಂಜೀವ ಶೆಟ್ಟಿ ಮೊಟ್ಟೆಕುಂಜ, ಕೃಷಿಕ ಸೀತಾರಾಮ ರೈ ನಡುವಂಗಡಿ, ಕೆನರಾ ಬ್ಯಾಂಕ್ ಪ್ರಬಂಧಕ ಉಷಾಂತ್ ಯಾದವ್, ದಾಮೋದರ ಮಣಿಯಾಣಿ ಮಲ್ಲಮೂಲೆ, ಪ್ರತಿಭಾ ಭಟ್ ಸ್ಮಿತಾ ಮೋಟೋರ್ಸ್ ಬದಿಯಡ್ಕ ಹಾಗೂ ಮಂದಿರದ ಪೋಷಕ ಸಂಘಟನೆಗಳು ನೂತನ ಕಟ್ಟಡ ಕಾಮಗಾರಿಗೆ ತಮ್ಮ ದೇಣಿಗೆಯನ್ನು ಫೋಷಿಸಿದರು. ಶ್ರೀ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ನಿಧಿಸಂಗ್ರಹದಲ್ಲಿ ಒಟ್ಟು ಹದಿಮೂರು ಲಕ್ಷ ರೂಪಾಯಿಗಳು ವಾಗ್ದಾನದ ಮೂಲಕ ಸಂಗ್ರಹವಾಯಿತು. ಧನಸಹಾಯದ ಮನವಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಈ ಸಂಧರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದದಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಎರಡು ಚಿನ್ನದ ಪದಕ ಪಡೆದ ಶೋಭಿತಾ ಪದ್ಮಾರ್ ಇವರನ್ನು ಯಾದವ ಸೇವಾ ಸಂಘ ಅಗಲ್ಪಾಡಿ ಇವರ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಗೋಪಾಲಕೃಷ್ಣ ಭಜನ ಮಂದಿರ ಹಾಗೂ ಮಹಿಳಾ ವಿಭಾಗದ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದುಷಿ ಲಾವಣ್ಯ ಗಿರೀಶ್ ಪ್ರಾರ್ಥನೆಯನ್ನು ಹಾಡಿದರು. ರಮೇಶ್ ಕೃಷ್ಣ ಪದ್ಮಾರು ವಂದಿಸಿದರು. ರಾಮಚಂದ್ರ ಭಟ್ ಉಪ್ಪಂಗಳ, ಪ್ರೊ.ಶ್ರೀನಾಥ್ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries