ತಿರುವನಂತಪುರ: ಉಚಿತ ಕ್ರಿಸ್‍ಮಸ್ ಕಿಟ್‍ಗಳ ವಿತರಣೆ ಇಂದಿನಿಂದ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವರು. ಕೋವಿಡ್ ಪರಿಹಾರದ ಅಂಗವಾಗಿ ಈ ಬಾರಿ ಸರ್ಕಾರ ಒದಗಿಸುವ ಕಿಟ್ ಅನ್ನು ಕ್ರಿಸ್‍ಮಸ್ ಕಿಟ್‍ನಂತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕ್ರಿಸ್‍ಮಸ್ ಕಿಟ್‍ನಲ್ಲಿ ಬಟಾಣಿ, ಸಕ್ಕರೆ, ಇಡಿ ಗೋಧಿ, ತೆಂಗಿನ ಎಣ್ಣೆ, ಮೆಣಸಿನ ಪುಡಿ, ಕಡಲೆ, ಬೀಜಗಳು, ಚಹಾ, ಬಟಾಣಿಗಳಿದ್ದು ಬಟ್ಟೆಯ ಚೀಲಗಳಲ್ಲಿ ವಿತರಿಸಲಾಗುವುದು. ಕ್ರಿಸ್‍ಮಸ್ ಕಿಟ್‍ಗಳಿಗಾಗಿ 482 ಕೋಟಿ ರೂ. ಸೆಪ್ಟೆಂಬರ್ ಮತ್ತು ಅಕ್ಟೋಬರ್‍ನಲ್ಲಿ ಉಚಿತ ಆಹಾರ ಕಿಟ್‍ಗಳಿಗಾಗಿ 368 ಕೋಟಿ ರೂ. ಬಿಡುಗಡೆಮಾಡಲಾಗಿದೆ.
ಇಲ್ಲಿಯವರೆಗೆ, ಕಿಟ್‍ಗಾಗಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಖರ್ಚು ಮಾಡಲಾಗಿದೆ. ಆದರೆ ಈ ಬಾರಿ ಕಿಟ್‍ಗಳ ವಿತರಣೆಗೆ ಹೆಚ್ಚುವರಿ ಮೊತ್ತವನ್ನು ಬಜೆಟ್‍ನಿಂದ ಮಂಜೂರು ಮಾಡಲಾಗಿದೆ. ಎಲ್ಲಾ ಕಾರ್ಡ್ ಹೊಂದಿರುವವರು ಪಡಿತರ ಅಂಗಡಿಗಳ ಮೂಲಕ ಕಿಟ್ ಪಡೆಯಬಹುದು.
ರಾಜ್ಯದ 88.92 ಲಕ್ಷ ಕಾರ್ಡುದಾರರಿಗೆ ಆಹಾರ ಕಿಟ್ ಸಿಗಲಿದೆ. ಅಕ್ಟೋಬರ್‍ನಲ್ಲಿ ಕಿಟ್ ಲಭಿಸಲು ಬಾಕಿ ಇರುವವರಿಗೆ ಕೊನೆಯ ದಿನಾಂಕವನ್ನು ಡಿಸೆಂಬರ್ 5 ಕ್ಕೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ನವೆಂಬರ್ ನ ಕಿಟ್ ವಿತರಣೆ ಇದರೊಂದಿಗೆ ಮುಂದುವರಿಯುತ್ತದೆ. ನವೆಂಬರ್‍ನ ಚಿಲ್ಲರೆ ಪಡಿತರ ವಿತರಣೆಯನ್ನು ಈ ತಿಂಗಳು ಐದಕ್ಕೆ ವಿಸ್ತರಿಸಲಾಗಿದೆ ಎಂದು ಸಿಎಂ ಹೇಳಿರುವರು.