ಕೊಲ್ಲಂ: ನೆಡುವತ್ತೂರ್ ಪಂಚಾಯತ್ ನ 'ನಾಪತ್ತೆಯಾಗಿದ್ದ' ಬಿಜೆಪಿ ಅಭ್ಯರ್ಥಿ ನಿನ್ನೆ ಮರಳಿದ್ದಾರೆ. ನೆಡುವತ್ತೂರ್ ಪಂಚಾಯತ್ ನ ಐದನೇ ವಾರ್ಡ್‍ನ ಬಿಜೆಪಿ ಅಭ್ಯರ್ಥಿ ಅಜೀವ್ ಕುಮಾರ್ ಅವರು ಕೊಟ್ಟಾರಕರ ಪೋಲೀಸ್ ಠಾಣೆಯಲ್ಲಿ ಹಾಜರಾದರು. ಅಜೀವ್ ಕುಮಾರ್ ಕಾಣೆಯಾಗಿದ್ದಾನೆ ಎಂದು ಕುಟುಂಬಸ್ಥರು ಭಾನುವಾರ ಪೋಲೀಸರಿಗೆ ದೂರು ನೀಡಿದ್ದರು.
ಸಿಪಿಐ ಬೆಂಬಲಿಗರಾದ ಅಜೀವ್ ಕುಮಾರ್ ಅವರು ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಸಿಪಿಐಯಿಂದ ಬೆದರಿಕೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ನಾಪತ್ತೆ ತೀವ್ರ ಕಳವಳಕ್ಕೆ ಕಾರಣವಾಗಿತ್ತು.
ಘಟನೆಯ ಬಗ್ಗೆ ಪೋಲೀಸರು ತನಿಖೆ ಆರಂಭಿಸುತ್ತಿರುವಂತೆ ಅಜೀವ್ ಸೋಮವಾರ ಮಧ್ಯಾಹ್ನ ಕೊಟ್ಟಾರಕರ ಪೋಲೀಸ್ ಠಾಣೆಗೆ ಹಾಜರಾದರು. ತನ್ನನ್ನು ಯಾರೂ ಅಪಹರಿಸಿಲ್ಲ ಮತ್ತು ಮಾನಸಿಕ ಒತ್ತಡದಲ್ಲಿದ್ದೆ ಎಂದು ಅಜೀವ್ ಕುಮಾರ್ ಹೇಳಿದ್ದಾರೆ.
ವೀಡಿಯೊ ಕಾನ್ಪರೆನ್ಸ್ ಮೂಲಕ ಅಜೀವ್ ಅವರನ್ನು ಪೋಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು.ಬಳಿಕ ಅಜೀವ್ ಕಾರ್ಯಕರ್ತರೊಂದಿಗೆ ಮತದಾನದ ಪ್ರಚಾರಕ್ಕೆ ತೆರಳಿದರು. ಅಜೀವ್ ಅವರ ನಾಪತ್ತೆಯೊಂದಿಗೆ ಎಡರಂಗಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಭಾನುವಾರ ಸಿಪಿಐ ಪಕ್ಷದ ಮುಖಂಡರು ಹೇಳಿಕೆ ನೀಡಿದ್ದರು.