HEALTH TIPS

ಭಾರತ- ಚೀನಾ ಗಡಿ ವಿವಾದ: ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೇವೆ- ಜೈಶಂಕರ್

          ನವದೆಹಲಿ: ಪೂರ್ವ ಲಡಾಖ್ ನಲ್ಲಿ ಚೀನಾದೊಂದಿಗಿನ ಏಳು ತಿಂಗಳ ಗಡಿ ವಿವಾದದಲ್ಲಿ ಭಾರತವನ್ನು ಪರೀಕ್ಷಿಸಲಾಗುತ್ತಿದೆ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಭಾರತ ಮೆಟ್ಟಿ ನಿಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

       ಎಫ್ ಐಸಿಸಿಐನ ವಾರ್ಷಿಕ ಸಭೆಯ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೂರ್ವ ಲಡಾಖ್‍ನಲ್ಲಿ ಏನಾಗಿದೆ ಎಂಬುದಕ್ಕೆ ಚೀನಾದ ಹಿತಾಸಕ್ತಿ ಕಾರಣವಲ್ಲಾ, ಏಕೆಂದರೆ ಅದು ಭಾರತದಲ್ಲಿ ಸಾರ್ವಜನಿಕ ಮನೋಭಾವವನ್ನು ಗಮನಾರ್ಹವಾಗಿ ಪ್ರಭಾವಿಸಿದೆ ಎಂದರು.

      ವಾಸ್ತವಿಕ ನಿಯಂತ್ರಣ ರೇಖೆ (ಎಲ್ ಎಸಿ) ಉದ್ದಕ್ಕೂ ಸಂಭವಿಸಿರುವ ಘಟನೆಗಳು ಗೊಂದಲಕಾರಿಯಾಗಿವೆ. ಅವುಗಳ ಕೆಲ ಮೂಲಭೂತ ಅಗತ್ಯತೆಗಳನ್ನು ತೋರಿಸಿವೆ ಎಂದು ಜೈ ಶಂಕರ್ ಹೇಳಿದರು. ವೃತ್ತಿಪರವಾಗಿ, ಕಳೆದ ಹಲವು ದಶಕಗಳಲ್ಲಿ ದೇಶದ ನಾಗರಿಕರು  ಸಾರ್ವಜನಿಕರು ಚೀನಾದ ಬಗ್ಗೆ ಯಾವ ರೀತಿಯ ಮನೋಭಾವ ಹೊಂದಿದ್ದೇನೆ ಎಂಬುದನ್ನು ನೋಡಿದ್ದೇನೆ. ತಮ್ಮ ಬಾಲ್ಯ ಹಾಗೂ ಹದಿಹರೆಯದ ದಿನಗಳಲ್ಲಿ ಹೆಚ್ಚಿನ ಕಷ್ಟದ ದಿನಗಳೇ ನೆನಪಾಗುತ್ತಿರುತ್ತವೆ ಎಂದ ಸಚಿವರು, ಉಭಯ ದೇಶಗಳ ನಡುವೆ ಸೌಹಾರ್ದಯುತ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಅನೇಕ ಕೆಲಸಗಳು ನಡೆಯುತ್ತಿರುವುದಾಗಿ ತಿಳಿಸಿದರು.

    ಈ ವರ್ಷದಲ್ಲಿ ನಡೆದಿರುವ ಘಟನೆಗಳು ನೆರವು ನೀಡಲಿವೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ, ಹಲವಾರು ವರ್ಷಗಳಿಂದ ಭಾರತವನ್ನು ಪರೀಕ್ಷಿಸಲಾಗುತ್ತಿದ್ದು, ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ನಾವು ಮೆಟ್ಟಿ ನಿಲ್ಲುತ್ತೇವೆ ಎಂದರು.

      ಪೂರ್ವ ಲಡಾಖ್ ನಲ್ಲಿ ಮೇ ತಿಂಗಳ ಆರಂಭದಿಂದಲೂ ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷ ಏರ್ಪಟ್ಟಿದ್ದು, ಉಭಯ ದೇಶಗಳ ನಡುವೆ ಅನೇಕ ಬಾರಿ ಮಿಲಿಟರಿ ಮಟ್ಟದ ಮಾತುಕತೆಗಳು ನಡೆದಿವೆ. ಆದಾಗ್ಯೂ, ಯಾವುದೇ ಮಹತ್ವಪೂರ್ಣವಾದ ಸಾಧನೆಯಾಗಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries