ತಿರುವನಂತಪುರ: ಸ್ಥಳೀಯ ಸಂಸ್ಥೆಗಳ ಮೊದಲ ಹಂತದ ಚುನಾವಣೆ ಉತ್ತಮ ರೀತಿಯಲ್ಲಿ ನಡೆಸಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ವಿ. ಭಾಸ್ಕರನ್ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಇದು ಸಾಬೀತುಪಡಿಸಿದೆ. ಮತದಾರರು ತಮ್ಮ ಮತಗಳನ್ನು ಸಕಾರಾತ್ಮಕ ರೀತಿಯಲ್ಲಿ ಚಲಾಯಿಸಿದ್ದಾರೆ. 75 ರಷ್ಟು ಮತದಾನವಾಗಿದೆ ಎಂದು ಅವರು ದೃಢಪಡಿಸಿದ ಹೇಳಿಕೆ ನೀಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ಹೆಸರನ್ನು ಮತದಾರ ಪತ್ರದಲ್ಲಿ ಸೇರಿಸದಿರುವುದರಿಂದ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದು ಅವರು ತಿಳಿಸಿದರು. ಅವರಿಗೆ 3 ಬಾರಿ ಮತಪತ್ರದಲ್ಲಿ ಹೆಸರು ಸೇರಿಸಲು ಅವಕಾಶ ನೀಡಲಾಗಿತ್ತು. ಆದರೂ ಹೆಸರು ನಾಪತ್ತೆಯಾಗಿರುವುದು ಅಕ್ಷಮ್ಯವಾಗಿದೆ ಎಂದ ವಿ.ಭಾಸ್ಕರನ್ ಎರಡನೇ ಹಂತದ ಚುನಾವಣೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.