ಕಾಸರಗೋಡು: ಪ್ರೊಬೇಷನ್ ಸಪ್ತಾಹ ಆಚರಣೆ ಮತ್ತು ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಸಂಸ್ಮರಣೆ ಕಾರ್ಯಕ್ರಮ ಜರುಗಿತು.
ಸಮಾಜನೀತಿ ಇಲಾಖೆ, ಕಾಸರಗೋಡುಜಿಲ್ಲಾ ಪೆÇ್ರಬೇಷನ್ ಕಚೇರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಂಟಿ ವತಿಯಿಂದ ಕಾಸರಗೋಡು ಡಿ.ಎನ್.ಎಸ್.ಎ. ಸಭಾಂಗಣದಲ್ಲಿ ಸಮಾರಂಭ ನಡೆಯಿತು.
ಪ್ರಧಾನ ನ್ಯಾಯಮೂರ್ತಿ ಎಸ್.ಎಚ್.ಪಂಜಾಪಕೇಷನ್ ಉದ್ಘಾಟಿಸಿದರು. ಸಹಾಯಕ ಜಿಲ್ಲಾ ನ್ಯಾಯಮೂರ್ತಿ ಟಿ.ಕೆ.ನಿರ್ಮಲಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಎಂ.ಸುಹೈಬ್ ಸಂಸ್ಮರಣೆ ಭಾಷಣ, ಸಹಾಯಕ ಜಿಲ್ಲಾ ನ್ಯಾಯಮೂರ್ತಿ ಆರ್.ಎಲ್.ಬೈಜು ಪ್ರಧಾನ ಭಾಷಣ ಮಾಡಿದರು. ಕಾಸರಗೋಡು ಪ್ರಾಸಿಕ್ಯೂಷನ್ ಡೆಪ್ಯೂಟಿ ಡೈರೆಕ್ಟರ್ ಇ.ವಿ.ಅಬ್ದುಲ್ ರಶೀದ್, ಸಹಾಯಕ ಜಿಲ್ಲಾ ನ್ಯಾಯಮೂರ್ತಿ ರಾಜನ್ ತಟ್ಟಿಲ್, ಕಾಸರಗೋಡು ಬಾರ್ ಅಸೋಸಿಯೇಶನ್ ಅಧ್ಯಕ್ಷ ಎ.ಸಿ.ಅಶೋಕ್ ಕುಮಾರ್, ಕಾಸರಗೋಡು ಪ್ರಧಾನ ಮುನ್ಸೀಫ್ ಪಿ.ಎಂ.ಬಾಲಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.