ಕಾಸರಗೊಡು: ಇತರ ರಾಜ್ಯಗಳಿಂದ ಆಗಮಿಸುವ ಮಂದಿ ಕೋವಿಡ್ ತಪಾಸಣೆ ನಡೆಸಬೇಕು ಎಂಬ ವಿನಂತಿಯ ಬಗ್ಗೆ ರಾಜಕೀಯ ಪಕ್ಷವೊಂದು ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ತಪಾಸಣೆ ಕಡ್ಡಾಯವಲ್ಲ ಎಂಬ ವಿಚಾರವನ್ನು ಮತ್ತೊಮ್ಮೆ ಸ್ಪಷ್ಟಪಡಿಸಲಾಗುತ್ತಿದೆ. ಇದು ಸವಿನಯ ವಿನಂತಿ ಮಾತ್ರ, ಇದು ಆದೇಶವಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಆಂಟಿಜೆನ್ ಟೆಸ್ಟ್ ನಡೆಸಲಾಗಿದೆಯೋ ಎಂದು ತಪಾಸಣೆ ನಡೆಸಲು ಯಾರಿಗೂ ಹೊಣೆ ನೀಡಿಲ್ಲ. ಯಾರಾದರೂ ಕೋವಿಡ್ ಸರ್ಟಿಫಿಕೆಟ್ ಸಂಬಂಧ ತಪಾಸಣೆ ನಡೆಸುತ್ತಿದ್ದರೆ ದಯವಿಟ್ಟು ಈ ವಿಚಾರವನ್ನು ತಮ್ಮ ಗಮನಕ್ಕೆ ತರಬೇಕು, ತಕ್ಷಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.