ಬದಿಯಡ್ಕ: ಜಿಲ್ಲಾ ಪಂಚಾಯತಿ ಎಡನೀರು ಡಿವಿಷನ್ ಬಿಜೆಪಿ ಅಭ್ಯರ್ಥಿ ಶೈಲಜಾ ಭಟ್ ರವರ ಚುನಾವಣಾ ಸಮಾವೇಶವನ್ನು ಬಿಜೆಪಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಲೀಗ್‍ನ ಅಜೆಂಡಾದಲ್ಲಿ ಯುಡಿಎಫ್‍ನಲ್ಲಿ ಕಾಂಗ್ರೆಸ್‍ಗೆ ಸ್ಥಾನವಿಲ್ಲದಂತೆ ಮಾಡಿದೆ ಎಂದರು. ಆತ್ಮಾಭಿಮಾನ ಇರುವಂತಹ ಕಾಂಗ್ರೆಸಿಗರಿಗೆ ಇನ್ನು ಅದರಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ನುಡಿದರು. ನ್ಯಾಯವಾದಿ ಎ.ಸದಾನಂದ ರೈ ಅಧ್ಯಕ್ಷತೆ ವಹಿಸಿದ್ದರು.
ಅಭ್ಯರ್ಥಿ ಶೈಲಜಾ ಭಟ್, ಎನ್.ಸತೀಶ್, ಹರೀಶ್ ನಾರಂಪಾಡಿ ಮೊದಲಾದವರು ಮಾತನಾಡಿದರು. ಪಿ.ಆರ್.ಸುನಿಲ್ ಸ್ವಾಗತಿಸಿ, ಎಂ.ನಾರಾಯಣ ಭಟ್ ವಂದಿಸಿದರು.