ಕಾಸರಗೋಡು: ಕೇಂದ್ರ ವೈದ್ಯಕೀಯ ಮಂಡಳಿಯು ಶಸ್ತ್ರಕ್ರಿಯೆ ನಡೆಸಲು ಆಯುರ್ವೇದ ವೈದ್ಯರಿಗೆ ಅವಕಾಶಮಾಡಿಕೊಟ್ಟಿರುವ ಆದೇಶದ ವಿರುದ್ಧ ಕಾಸರಗೋಡು ಐಎಂಎ ಶಾಖೆ ವತಿಯಿಂದ ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಯಿತು. ಕಾಸರಗೋಡು ಜನರಲ್ ಆಸ್ಪತ್ರೆ ವಠಾರದಲ್ಲಿ ನಡೆದ ಧರಣಿಯನ್ನು ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ. ರಾಜಾರಾಮ ಉದ್ಘಾಟಿಸಿದರು.
ಐಎಂಎ-ಕೆಜಿಎಂಓ ಪದಾಧಿಕಾರಿಗಳಾದ ಡಾ. ಸುರೇಶ್‍ಬಾಬು, ಡಾ. ಜಮಾಲ್ ಅಹಮ್ಮದ್, ಡಾ. ಮಹಮ್ಮದ್, ಡಾ. ವೆಂಕಟಗಿರಿ, ಡಾ. ಜನಾರ್ದನ ನಾಯ್ಕ್, ಖಾಸಿಮ್, ಡಾ. ಆಮಿನಾ ಟಿ.ಪಿ. ಉಪಸ್ಥಿತರಿದ್ದರು. ಆದೇಶ ಖಂಡಿಸಿ ಡಿಸೆಂಬರ್ 11ರಂದು ಬೆಳಗ್ಗೆ 6ರಿಂದ ಸಾಯಂಕಾಲ 6ರ ವರೆಗೆ ವೈದ್ಯಕೀಯ ಬಂದ್ ನಡೆಸಲು ತೀರ್ಮಾನಿಸಲಾಯಿತು. ಕೇಂದ್ರ ವಐದ್ಯಕೀಯ ಮಂಡಳಿಯ ಹೊಸ ಆದೇಶ ಜಗತ್ತಿನ ಆಧುನಿಕ ಸಮಾಜ ವೈದ್ಯಕೀಯ ಕ್ಷೇತ್ರದಲ್ಲಿ ಅಳವಡಿಸಿಕೊಂಡಿರುವ ಕ್ರಮಕ್ಕೆ ವಿರುದ್ಧವಾಗಿರುವುದಾಗಿ ಸಭೆ ಅಭಿಪ್ರಾಯಪಟ್ಟಿದೆ.