ಜಮ್ಮು: ಜಮ್ಮು-ಕಾಶ್ಮೀರದ ಪೆÇಂಚ್ ಜಿಲ್ಲೆಯಲ್ಲಿ ತಿಳಿಯದೆ ಆಕಸ್ಮಿಕವಾಗಿ ಗಡಿ ದಾಟಿದ ಪಾಕ್ ಆಕ್ರಮಿತ ಕಾಶ್ಮೀರದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಭಾರತೀಯ ಸೇನೆ ಶನಿವಾರ ಬೆಳಗ್ಗೆ ವಶಕ್ಕೆ ತೆಗೆದುಕೊಂಡಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಸಮೀಪದ ಕಹುತಾ ತೆಹ್ಸಿಲ್ ನ ಅಬ್ಬಾಸ್ ಪುರ್ ಗ್ರಾಮದ 17 ವರ್ಷದ ಲೈಬಾ ಜಬೈರ್ ಮತ್ತು 13 ವರ್ಷದ ಸನಾ ಜಬೈರ್ ಎಂಬ ಬಾಲಕಿಯರು ಇಂದು ಬೆಳಗ್ಗೆ ಪೆÇಂಚ್ ಸೆಕ್ಟರ್ ನಲ್ಲಿ ಭಾರತ ಕಡೆ ಆಕಸ್ಮಿಕವಾಗಿ ಪ್ರವೇಶಿಸಿದ್ದಾರೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ತಿಳಿಸಿದ್ದಾರೆ.
ಗಡಿ ನಿಯಂತ್ರಣಾ ದಾಟಿದ್ದನ್ನು ಗಮನಿಸಿರುವ ಭಾರತೀಯ ಪಡೆಗಳು, ಬಾಲಕಿಯರಿಗೆ ಯಾವುದೇ ತೊಂದರೆಯಾಗದಂತೆ ಸಂಯಮ ತೋರಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಆದಷ್ಟೂ ಬೇಗ ಹಸ್ತಾಂತರಿಸಲು ಪ್ರಯತ್ನಗಳು ಸಾಗಿವೆ ಎಂದು ಅವರು ತಿಳಿಸಿದ್ದಾರೆ.