ಕುಂಬಳೆ:ಕುಂಬಳೆ ಸಮೀಪದ ಕಾನಮೂಡಕರೆ ದಿ.ಸುಬ್ರಾಯ ಭಟ್ಟರ ನಾಲ್ಕನೆ ಪುಣ್ಯತಿಥಿಯಂಗವಾಗಿ ಅವರ ಸ್ವಗೃಹದಲ್ಲಿವಿರಾಮ ಯಕ್ಷಬಳಗ ಶಾಂತಿಪ್ಪಳ್ಳ ತಂಡದಿಂದ ವಾಲಿಮೋಕ್ಷ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪಣಾಜೆ ವೆಂಕಟ್ರಮಣ ಭಟ್ ಹಾಗೂ ವೆಂಕಟರಾಜ ಕುಂಟಿಕಾನ, ಮದ್ದಳೆಯಲ್ಲಿ ಅನಿಕೇತ ಸುಬ್ರಾಯ ಭಟ್ ಹಾಗೂ ಕೃಷ್ಣಮೂರ್ತಿ ಪಾಡಿ, ಚೆಂಡೆ ಅಂಬೆಮೂಲೆ ಶಿವಶಂಕರ ಭಟ್ ಸಹಕರಿಸಿದರು. ಪಾತ್ರವರ್ಗದಲ್ಲಿ ಜಯರಾಮ ದೇವಸ್ಯ(ಶ್ರೀರಾಮ), ವಿಷ್ಣುಪ್ರಕಾಶ ಪೆರ್ವ(ಸುಗ್ರೀವ), ಉದಯಶಂಕರ ಮಜಲು(ವಾಲಿ), ಅನಿಕೇತ ಸುಬ್ರಾಯ ಭಟ್(ತಾರೆ) ಪಾತ್ರಗಳನ್ನು ನಿರ್ವಹಿಸಿದರು. ಕೃಷ್ಣಕುಮಾರ ಪ್ರಸ್ತಾವಿಕವಾಗಿ ಮಾತನಾಡಿ ವಂದಿಸಿದರು.