HEALTH TIPS

ಸ್ಥಳೀಯಾಡಳಿತ ಚುನಾವಣೆ- ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಕಾರ್ಯಕರ್ತರು, ಮತದಾತರು ಪಾಲಿಸಬೇಕಾದ ಕಟ್ಟುನಿಟ್ಟುಗಳು-ಏನೇನು?

                 

     ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಂದು ಪಂಚಾಯತ್ ವಿಭಾಗದಲ್ಲಿ ಪೆÇೀಲಿಂಗ್ ಬೂತ್ ಗಳಿಂದ 200 ಮೀಟರ್ ಅಂತರದಲ್ಲಿ , ನಗರಸಭೆಗಳ ವಿಭಾಗದಲ್ಲಿ 100 ಮೀಟರ್ ಅಂತರದಲ್ಲಿ ಮಾತ್ರ ಬೂತ್ಗಳನ್ನು ಸ್ಥಾಪಿಸಬಹುದು. ಅಭ್ಯರ್ಥಿಗಳ ಚುನಾವಣೆ ಬೂತ್ ಗಳಲ್ಲಿ ಅಭ್ಯರ್ಥಿಗಳ ಹೆಸರು, ಚಿಹ್ನೆ ಇತ್ಯಾದಿ ನಿಖರವಾಗಿ ತೋರುವ ಬ್ಯಾನರ್ ಸ್ಥಾಪಿಸಬಹುದಾಗಿದೆ. ಬೂತ್ ನಿರ್ಮಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಲಿಖಿತ ರೂಪದ ಅನುಮತಿ ಪಡೆದಿರಬೇಕು. ತಪಾಸಣೆಯ ವೇಳೆ ಅದನ್ನು ಹಾಜರುಪಡಿಸಬೇಕು. 

     ಮತದಾನದ ದಿನ ಪಂಚಾಯತ್ ವಿಭಾಗದಲ್ಲಿ ಮತಗಟ್ಟೆಯಿಂದ 200 ಮೀಟರ್ ಅಂತರದಲ್ಲಿ, ನಗರಸಭೆಯ ವಿಭಾಗದಲ್ಲಿ ಮತಗಟ್ಟಯಿಂದ 100 ಮೀಟರ್ ಅಂತರದಲ್ಲಿ ಮತಯಾಚನೆ ನಡೆಸಕೂಡದು. ನಿರೀಕ್ಷಕ, ಚುನಾವಣೆ ಅಧಿಕಾರಿ, ಸುರಕ್ಷಾ ಸಿಬ್ಬಂದಿ, ಪ್ರಿಸೈಡಿಂಗ್ ಅಧಿಕಾರಿ ಅವರನ್ನು ಹೊರತುಪಡಿಸಿ ಬೇರಾರೂ ಮೊಬೈಲ್ ಫೆÇೀನ್ ಮತಗಟ್ಟೆಗಳಿಗೆ ತರಕೂಡದು. ಮತದಾನದಂದು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತದಾತರನ್ನು ಮತಗಟ್ಟೆಗಳಿಗೆ ವಾಹನಗಳಲ್ಲಿ ಕರೆತರುವುದು ಸಲ್ಲದು, ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ಇಂಥಾ ಕ್ರಮ ನಡೆಸುವುದು ಅಪರಾಧವಾಗುತ್ತದೆ. 

            ಮತಗಟ್ಟೆಗಳಲ್ಲಿ ಏಕಕಾಲಕ್ಕೆ ಮೂವರು ಮತದಾತರಿಗೆ ಮಾತ್ರ ಪ್ರವೇಶ:

   ಮತಗಟ್ಟೆಗಳಲ್ಲಿ ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರ ಅಂಗವಾಗಿ ಏಕಕಾಲಕ್ಕೆ ಮೂವರು ಮತದಾತರಿಗೆ ಮಾತ್ರ ಮತಗಟ್ಟೆಗಳಿಗೆ ಪ್ರವೇಸಾತಿ ಇರುವುದು. ರೋಗ ಬಧಿತರು, 70 ವರ್ಷ ಪ್ರಾಯ ದಾಟಿದವರು ಮೊದಲಾದವರು ಸಾಲಾಗಿ ನಿಲ್ಲಬೇಕಿಲ್ಲ. ಮಹಿಳೆಯರಿಗೆ ಮತ್ತು ಪುರುಷರಿಗೆ ಬೇರೆ ಬೇರೆ ಸಾಲುಗಳಿರುವುದು. ಬೂತ್ ಪ್ರವೇಶಿಸುವ ವೆಳೆ ಗುರುತು ಪತ್ರ ಹಾಜರುಪಡಿಸಬೇಕು. ಮತದಾತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಗುರುತು ಪತ್ತೆಯ ವೇಳೆ ಅಗತ್ಯಬಿದ್ದಲ್ಲಿ ಒಮ್ಮೆ ಮಾಸ್ಕ್ ತೆರವುಗೊಳಿಸಬೇಕಾದೀತು. ದಾಖಲಾತಿ ಪತ್ರದಲ್ಲಿ ಸಹಿತ ಮತ್ತು ಬೆರಳಚ್ಚು ಪಡೆಯಬೇಕು. ಮತದಾತರ ಬೆರಳಿಗೆ ಶಾಯಿಯಿಂದ ಗುರುತು ಮಾಡಲಾಗುವುದು. 

        ಒಂದು ಮತಗಟ್ಟೆಯಲ್ಲಿ 4 ಮಂದಿ ಪೆÇೀಲಿಂಗ್ ಸಿಬ್ಬಂದಿ, ಒಬ್ಬ ಪೆÇೀಲಿಂಗ್ ಸಹಾಯಕ, ಒಬ್ಬ ಪೆÇಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರುವರು. ಅಭ್ಯರ್ಥಿಗಳ ಮತ್ತು ಏಜೆಂಟರ ಸಂಖ್ಯೆ ಹತ್ತಕ್ಕಿಂತ ಅಧಿಕವಾಗಿರಕೂಡದು. ಪೆÇೀಲಿಂಗ್ ಏಜೆಂಟರ ಕುಳಿತುಕೊಳ್ಳುವ ವ್ಯವಸ್ಥೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮತದಾನಕ್ಕೆ ಮುನ್ನ ಮತಗಟ್ಟೆಗಳನ್ನು ರೋಗಾಣುಮುಕ್ತಗೊಳಿಸಬೇಕು. ಮತಗಟ್ಟೆಯ ಹೊರಬದಿಯಲ್ಲಿ ನೀರು, ಸಾಬೂನು, ಮತಗಟ್ಟೆಯ ಒಳಗಡೆ ಸಾನಿಟೈಸರ್ ಕಡ್ಡಾಯವಾಗಿ ಇರಿಸಬೇಕು. ಮತಗಟ್ಟೆ ಪ್ರವೇಶಿಸುವ ಮತ್ತು ಹೊರಗೆ ತೆರಳುವ ವೇಳೆ ಪೆÇೀಲಿಂಗ್ ಸಹಾಯಕರು ಸಾನಿಟೈಸರ್ ವಿತರಣೆ ನಡೆಸಬೇಕು. ಪೆÇೀಲಿಂಗ್ ಸಿಬ್ಬಂದಿ ಫೇಸ್ ಶೀಲ್ಡ್, ಮಾಸ್ಕ್, ಗ್ಲೌಸ್ ಧರಿಸಬೇಕು. ಸಾನಿಟೈಸರ್ ಬಳಸಬೇಕು. ಮತಗಟ್ಟೆಯ ಮುಂದೆ ಮತದಾತರು ಸಾಮಾಜಿಕ ಅಂತರ ಕಾಯ್ದುಕೊಂಡು ಸಾಲಾಗಿ ನಿಲ್ಲಬೇಕು. ಇದಕ್ಕೆ ಪೂರಕವಾಗಿ ಪ್ರತ್ಯೇಕ ಮಾರ್ಕ್ ನಡೆಸುವಂತೆ ರಾಜ್ಯ ಚುನಾವಣೆ ಆಯೋಗ ಆದೇಶ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries