ಕೊಚ್ಚಿ: ಚೆಂಗಮನಾಡಿನಲ್ಲಿ ಶ್ವಾನವನ್ನು ಕಾರಿನ ಹಿಂದೆ ಕಟ್ಟಿ ಎಳೆದೊಯ್ದ ಘಟನೆಯ ಬಗ್ಗೆ ಬಿಜೆಪಿ ಮುಖಂಡೆ, ಖ್ಯಾತ ಪ್ರಾಣಿದಯಾ ಕಾರ್ಯಕರ್ತೆ ಮೇನಕಾ ಗಾಂಧಿ ಮಾಹಿತಿ ಕೋರಿದ್ದಾರೆ. ಘಟನಾ ಸ್ಥಳಕ್ಕೆ ರಾಜ್ಯ ಪೆÇಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಮತ್ತು ಅಲುವಾ ಗ್ರಾಮೀಣ ಎಸ್.ಪಿ ಅವರನ್ನು ತೆರಳಿ ವರದಿ ನೀಡುವಂತೆ ಸೂಚಿಸಿದ್ದಾರೆ. ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಘಟನೆ ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿತ್ತು. ನೆಡುಂಬಸ್ಸೆರಿ ವಿಮಾನ ನಿಲ್ದಾಣದ ಬಳಿ ನಾಯಿಯನ್ನು ಕಾರಿಗೆ ಕಟ್ಟಿಹಾಕಿ ಎಳೆದೊಯ್ದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಾರನ್ನು ಹಿಂಬಾಲಿಸಿದ ಅಖಿಲ್ ಎಂಬ ಬೈಕ್ ಸವಾರ ತನ್ನ ಮೊಬೈಲ್ ಫೆÇೀನ್‍ನಲ್ಲಿ ಚಿತ್ರೀಕರಿಸಿ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಳಿಕ ಅಖಿಲ್ ಹಾಗೂ ಸ್ಥಳೀಯ ಕೆಲವರು ಕಾರನ್ನು ನಿಲ್ಲಿಸಿ ನಾಯಿಯನ್ನು ಬಿಡುಗಡೆಗೊಳಿಸಿದ್ದರು.
ಘಟನೆಯಲ್ಲಿ ನಾಯಿಯ ಮಾಲೀಕ ಅತನಿ ಚಲಕ ಕೊನ್ನಮ್ ನ ಯೂಸುಫ್ (62) ಎಂಬಾತನನ್ನು ಬಂಧಿಸಲಾಗಿದೆ. ಕುಟುಂಬ ಸದಸ್ಯರು ಇಷ್ಟಪಡದ ಕಾರಣ ನಾಯಿಯನ್ನು ಬಿಡಲು ಪ್ರಯತ್ನಿಸಿದ್ದೇನೆ ಎಂದು ಯೂಸುಫ್ ಪೆÇಲೀಸರಿಗೆ ತಿಳಿಸಿದ್ದಾರೆ. ಹೆಣ್ಣು ನಾಯಿಯಾಗಿರುವುದರಿಂದ ಇತರ ಗಂಡು ನಾಯಿಗಳು ಮನೆಗೆಯತ್ತ ಸುಳಿದು ಕಿರಿಕಿರಿ ನೀಡುತ್ತಿದ್ದ ಕಾರಣ ಶ್ವಾನವನ್ನು ಬೇರೆಡೆಗೆ ಸಾಗಿಸಲು ಯತ್ನಿಸಿದ್ದು ಕಾರಿಗೆ ಏರದ ಕಾರಣ ಹೀಗೆ ಮಾಡಬೇಕಾಯಿತೆಂದು ತಿಳಿಸಿದ್ದಾನೆ.