ತಿರುವನಂತಪುರ: ಕೋವಿಡ್ ಲಾಕ್‍ಡೌನ್‍ನಿಂದಾಗಿ ಕಳೆದ ಒಂಬತ್ತು ತಿಂಗಳಿಂದ ಮುಚ್ಚಲ್ಪಟ್ಟಿದ್ದ ಬಾರ್‍ಗಳು ಮತ್ತು ಬಿಯರ್-ವೈನ್ ಪಾರ್ಲರ್‍ಗಳನ್ನು ಮಂಗಳವಾರದಿಂದ ಮತ್ತೆ ತೆರೆಯಲಾಗಿದೆ.
ಈವರೆಗೆ ಕೋವಿಡ್ ಹಿನ್ನೆಲೆಯಲ್ಲಿ ಪಾರ್ಸೆಲ್‍ಗಳನ್ನು ಮಾತ್ರ ಮಾರಾಟ ಮಾಡಲಾಗಿದೆ. ಕೋವಿಡ್ ನಿಬಂಧನೆ ಅನುಸರಿಸಿ ಬಾರ್ ತೆರೆಯಲು ಅಬಕಾರಿ ಇಲಾಖೆಯ ಶಿಫಾರಸನ್ನು ಮುಖ್ಯಮಂತ್ರಿ ಅಂಗೀಕರಿಸಿದ್ದು ಸರ್ಕಾರ ಈ ಆದೇಶ ಹೊರಡಿಸಿದೆ.
ಬಿಯರ್ ಮತ್ತು ವೈನ್ ಪಾರ್ಲರ್‍ಗಳು, ಕ್ಲಬ್‍ಗಳು ಮತ್ತು ಶರಾಬು ಅಂಗಡಿಗಳನ್ನು ತೆರೆಯಲಾಗಿದೆ. ಬಿವರೇಜ್ ಕಾರ್ಪೋರೇಶನ್ ಮತ್ತು ಕನ್ಸ್ಯೂಮರ್ ಫೆಡ್‍ನ ಮದ್ಯದಂಗಡಿಗಳು ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ತೆರೆದಿರಲು ಸೂಚಿಸಲಾಗಿದೆ.