ತಿರುವನಂತಪುರ: ನೆಯ್ಯಾಟಿಂಗರದಲ್ಲಿ ದಂಪತಿಗಳು ಭೂ ವಿವಾದಕ್ಕೆ ಸಂಬಂಧಿಸಿ ಮರಣಿಸಿದ ಘಟನೆ ಸಂಬಂಧ ಮರಣಹೊಂದಿದ ರಾಜನ್ ದಂಪತಿಗಳ ನೆರೆಮನೆ ನಿವಾಸಿ, ದೂರುದಾತೆ ವಸಂತೆ ಎಂಬವರ ಭೂ ದಾಖಲೆಗಳ ನಿಖರತೆ ಪರಿಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ನೆಯ್ಯಾಟಿಂಗರ ತಹಶೀಲ್ದಾರರಲ್ಲಿ ವರದಿ ನೀಡುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ.
ರಾಜನ್ ಮತ್ತು ಆತನ ಕುಟುಂಬವನ್ನು ಸ್ಥಳದಿಂದ ಎತ್ತಂಗಡಿಗೈಯ್ಯಲು ಪೋಲೀಸರು ಬೆದರಿಸಿರುವುದು ಭೂ ಸಂಬಂಧಿ ವಿವಾದದ ಬಗ್ಗೆ ಹೈಕೋರ್ಟ್ ಅಫೀಲು ನೀಡುವ ಒಂದಷ್ಟು ಮೊದಲು ಎಂಬ ವರದಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮಕ್ಕೆ ಮುಂದಾಗಿದ್ದಾರೆ. ಕೇವಲ ಒಂದೂವರೆ ಗಂಟೆಗಳ ಅವಧಿಯೊಳಗೆ ಹೈಕೋರ್ಟ್ ಸ್ಟೇ ಕೈಸೇರುವ ಹೊತ್ತಿಗೆ ಆತ್ಮಹತ್ಯೆ ಯತ್ನದ ಮಧ್ಯೆ ತೀವ್ರ ಅಸ್ವಸ್ಥರಾದ ದಂಪತಿಗಳು ಆಸ್ಪತ್ರೆಗೆ ದಾಖಲಾಗಬೇಕಾಯಿತು.
ರಾಜನ್ ಮತ್ತವರ ಕುಟುಂಬವನ್ನು ಎತ್ತಂಗಡಿಗೈಯ್ಯಲು ನೆಯ್ಯಾಟಿಂಗರ ಪ್ರನ್ಸಿಪಲ್ ಕೋರ್ಟ್ ನ ತೀರ್ಪನ್ನು ಜಾರಿಗೊಳಿಸಲು ಡಿಸೆಂಬರ್ 22 ರಂದು ಮಧ್ಯಾಹ್ನ ವೇಳೆ ಪೋಲೀಸರ ತಂಡ ಲಕ್ಷಂಬೀಡು ಕಾಲನಿಯಲ್ಲಿರುವ ರಾಜನ್ ಅವರ ಮನೆಗೆ ತಲಪಿದ್ದರು. ಅದರ ಬೆನ್ನಿಗೇ ಮಧ್ಯಾಹ್ನ ಊಟದ ಬಳಿಕ 2.30ರ ವೇಳೆ ಜಸ್ಟೀಸ್ ವಿ.ಶರ್ಸಿ ಏಕಸದಸ್ಯ ಬೆಂಚ್ ರಾಜನ್ ನೀಡಿದ್ದ ಅಪೀಲನ್ನು ಪರಿಗಣಿಸಿ ಪ್ರಿನ್ಸಿಪಲ್ ನ್ಯಾಯಾಲಯದ ತೀರ್ಪಿಗೆ ಸ್ಟೇ ನೀಡಿತ್ತು. ಆದರೆ ಅಷ್ಟರಲ್ಲಾಗಲೆ ದಂಪತಿಗಳು ಆತ್ಮಹತ್ಯೆ ಶ್ರಮ ನಡೆಸಿ ಆಸ್ಪತ್ರೆಗೆ ದಾಖಲಾಗಿ ಕೊನೆಗೆ ಕೊನೆಯುಸಿರೆಳೆದ ದುರ್ಘಟನೆಗೆ ಕಾರಣವಾಯಿತು.