ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತಿ ನಲ್ಲಿ ಕಳೆದ ಹತ್ತು ವರ್ಷಗಳಿಂದ ಯು ಡಿ ಎಫ್ ಆಡಳಿತವನ್ನು ನಡೆಸುತ್ತಿದ್ದು ಕುಂಬ್ಡಾಜೆ ಯನ್ನು ಅಭಿವೃದ್ಧಿ ಶೂನ್ಯ ಪಂಚಾಯತಾಗಿ ಮಾರ್ಪಾಡು ಮಾಡಿದೆಯೆಂದೂ, ಅಭಿವೃದ್ಧಿ ಕೆಲಸಗಳನ್ನು ನಡೆಸಲು ಬಿಜೆಪಿಯಿಂದ ಮಾತ್ರ ಸಾಧ್ಯವೆಂದೂ ಬಿಜೆಪಿ ಕೇರಳ ಪ್ರಾಂತ್ಯ ಸಮಿತಿ ಸದಸ್ಯರಾದ ಪಿ. ರಮೇಶ್ ಹೇಳಿದರು.
ನಿಸ್ವಾರ್ಥ ಮನಸ್ಸಿನ ಕಾರ್ಯಕರ್ತರ ತಂಡ ಹಾಗೂ ಕೇಂದ್ರದ ಮೋದಿ ಸರಕಾರದ ಜನಪರ ಯೋಜನೆಗಳ ಫಲವಾಗಿ ಈ ಸಲ ಕುಂಬ್ಡಾಜೆ ಗ್ರಾಮ ಪಂಚಾಯತಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಯೆಂದೂ ಅವರು ಹೇಳಿದರು. ಬಿಜೆಪಿ ಕುಂಬ್ಡಾಜೆ ಪಂಚಾಯತಿನ 9ನೇ ವಾರ್ಡಿನ ಕಾರ್ಯಕರ್ತರ ಸಮಾವೇಶವನ್ನು ಉಧ್ಘಾಟಿಸಿ ಮಾತನಾಡಿದರು.
ವಿರೋಧ ಪಕ್ಷದ ನಾಯಕರೂ, ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಅಧ್ಯಕ್ಷರೂ ಆದ ರವೀಂದ್ರ ರೈ ಗೋಸಾಡರವಾರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನೆತಾರರಾದ ಶೈಲಜಾ ಭಟ್, ಶಶೀದರ ತೆಕ್ಕೇಮೂಲೆ, ರಾಜೇಶ್ ಶೆಟ್ಟಿ, ಚಂದುಮಾಸ್ತರ್, ಗಂಗಾಧರ್ ರೈ, ಸುಂದರ ಮವ್ವಾರ್, ನಳಿನಿ ಕೆ, ರಮೇಶ್ ಶರ್ಮ ಫ್ರಮೋದ್ ಭಂಡಾರಿ,ನಾರಾಯಣ ಕೆ ಎಂ, ಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಈಹಿಂದೆ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ನಳಿನಿ ಕೆ ಹಾಗೂ ಬ್ಲಾಕ್ ಪಂಚಾಯತು ಸದಸ್ಯರಾದ ಸುಂದರ ಮವ್ವಾರು ರವರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.