HEALTH TIPS

ಮತ ಎಣಿಕೆ ಪ್ರಕ್ರಿಯೆಯ ಮಾರ್ಗಸೂಚಿಗಳು ಪ್ರಕಟ

       ಕಾಸರಗೋಡು: ಡಿ.16ರಂದು ನಡೆಯುವ ಮತೆಣಿಕೆ ಪ್ರಕ್ರಿಯೆ ನಡೆಯುವ ಕೇಂದ್ರಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ರಾಜ್ಯ ಚುನಾವಣೆ ಆಯೋಗ ಪ್ರಕಟಿಸಿದೆ. 

           ಮೂರು ಹಂತಗಳಲ್ಲಿ ಮತೆಣಿಕೆ ನಡೆಯಲಿದೆ. ಡಿ.16ರಂದು ಬೆಳಗ್ಗೆ 8 ರಿಂದ ಚಟುವಟಿಕೆಗಳು ಆರಮಭಗೊಳ್ಳಲಿವೆ. ರಾಜ್ಯದಲ್ಲಿ ಒಟ್ಟು 244 ಮತೆಣಿಕೆ ಕೇಂದ್ರಗಳು ಚಟುವಟಿಕೆ ನಡೆಸಲಿವೆ. ಪ್ರತಿ ಕೇಂದ್ರದಲ್ಲೂ ಮತೆಣಿಕೆಯ ಪ್ರಗತಿಯನ್ನು ಆಯೋಗದ "ಟ್ರೇಡ್ಸ್" ಸಾಫ್ಟ್ ವೇರ್ ನಲ್ಲಿ ಯಥಾಸಮಯ ಅಪ್ ಲೋಡ್ ನಡೆಸಲಾಗುವುದು. 

            ಕ್ರಮಬದ್ಧ ಸಿದ್ಧತೆ:  

     ತ್ರಿಸ್ತರ ಪಂಚಾಯತ್ ಗಳ ಮತಎಣಿಕೆ ಬ್ಲೋಕ್ ಮಟ್ಟದಲ್ಲಿ ವಿತರಣೆ ಕೇಂದ್ರಗಳಲ್ಲಿ ನಡೆಯಲಿವೆ. ನಗರಸಭೆಗಳಲ್ಲೂ, ನಿಗಮಗಳಲ್ಲೂ ಆಯಾ ಸಂಸ್ಥೆಗಳ ವಿತರಣೆ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ಜರುಗುವುದು. ಮತೆಣಿಕೆ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯ ಏರ್ಪಡಿಸುವ ಹೊಣೆ ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗೆ ಇರುವುದು. ಬ್ಲೋಕ್ ಪಂಚಾಯತ್ ಚುನಾವಣೆಗೆ ಒಂದು ಹಾಲ್, ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಿಗೆ ಪ್ರತ್ಯೇಕ ಕೌಂಟಿಕ್ ಹಾಲ್ ಸಜ್ಜುಗೊಳಿಸಲಾಗುವುದು. ನಗರಸಭೆಗಳಲ್ಲಿ, ನಿಗಮಗಳಲ್ಲಿ ಪ್ರತಿ ಚುನಾವಣೆ ಅಧಿಕಾರಿಗೆ ಪ್ರತ್ಯೇಕ ಕೌಂಟಿಂಗ್ ಹಾಲ್ ಇರುವುದು. ಗರಿಷ್ಠ 8 ಪೆÇೀಲಿಂಗ್ ಸ್ಟೇಷನ್ ಗಳಿಗೆ ಒಂದು ಟೇಬಲ್ ಎಂಬ ರೀತಿಯಲ್ಲಿ ಎಣಿಕೆ ಮೇಜುಗಳನ್ನು ಸಜ್ಜುಗೊಳಿಸಬೇಕು. ಪ್ರತಿ ವಾರ್ಡಿನ ಎಲ್ಲ ಪೆÇೀಲಿಂಗ್ ಸ್ಟೇಷನ್ ಗಳ ಮತ ಎಣಿಕೆ ಒಂದು ಮೇಜಿನಲ್ಲಿ ನಡೆಯುವ ರೀತಿ ಸಿದ್ಧತೆ ನಡೆಸಲಾಗುವುದು. 

              ಮೊದಲು ಅಂಚೆ ಮತ ಎಣಿಕೆ:

     ಅಂಚೆ ಮತ ಗಳನ್ನು ಮೊದಲು ಎಣಿಕೆ ಮಾಡಲಾಗುವುದು. ಗ್ರಾಮ ಪಂಚಾಯತ್ ಗಳ, ಬ್ಲೋಕ್ ಪಂಚಾಯತ್ ಗಳ, ಜಿಲ್ಲಾ ಪಂಚಾಯತ್ ಗಳ ಅಂಚೆ ಮತಗಳನ್ನು ಆಯಾ ಚುನಾವಣೆ ಅಧಿಕಾರಿ ಎಣಿಕೆ ನಡೆಸುವರು. ಎಣಿಕೆ ಸಭಾಂಗಣದಲ್ಲಿ ಸಜ್ಜುಗೊಳಿಸಲಾದ ಎಣಿಕೆ ಮೇಜುಗಳ ಸಂಖ್ಯೆ ಗಣನೆ ಮಾಡಿದ ನಂತರವಷ್ಟೇ ಸ್ಟ್ರಾಂಗ್ ರೂಂ ನಿಂದ ಕಂಟ್ರೋಲ್ ಯೂನಿಟ್ ಗಳನ್ನು ಪಡೆಯಬೇಕು. ಒಮದನೇ ವಾರ್ಡ್ ನಿಂದ ಎಂಬ ಕ್ರಮದಲ್ಲಿ ಮತ ಎಣಿಕೆ ಆರಂಭಿಸಬೇಕಿದೆ. ಒಂದು ವಾರ್ಡಿನಲ್ಲಿ ಒಂದಕ್ಕಿಂತ ಅಧಿಕ ಬೂತ್ ಗಳು ಇದ್ದಲ್ಲಿ ಅವನ್ನು ಒಂದು ಮೇಜಿನಲ್ಲಿ ಎಣಿಸಬೇಕು. ತ್ರಿಸ್ತರ ಪಂಚಾಯತ್ ಗಳಲ್ಲಿ ಪ್ರತಿಯೊಂದು ಮೇಜಿಗೆ ಒಬ್ಬ ಮೇಲ್ನೋಟಕ, ಇಬ್ಬರು ಎಣಿಕೆ ಸಹಾಯಕರು, ನಗರಸಭೆಗಳಲ್ಲಿ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬ ಎಣಿಕೆ ಸಹಾಯಕ ಇರುವರು. 

           ಟ್ರೇಡ್ ಮೂಲಕ ಮಾಹಿತಿ: 

     ಟ್ರೇಡ್ ಸಾಫ್ಟ್ ವೇರ್ ಗೆ ಮತ ಎಣಿಕೆಯ ಮಾಹಿತಿ ಅಪೆÇ್ಲೀಡ್ ನಡೆಸುವ ನಿಟ್ಟಿನಲ್ಲಿ ಎಣಿಕೆ ಕೇಂದ್ರಗಳಲ್ಲಿ ಬ್ಲೋಕ್ ಚುನಾವಣೆ ಅಧಿಕಾರಿ ಅವರ ಸಭಾಂಗಣದ ಬಳಿ, ನಗರಸಭೆಯ ಎಣಿಕೆ ಕೇಂದ್ರಗಳಲ್ಲಿ ಡೇಟಾ ಅಪ್ ಲೋಡಿಂಗ್ ಸೆಂಟರ್ ಗಾಗಿ ಪ್ರತ್ಯೇಕ ಸಜ್ಜು ನಡೆಯುವುದು. ಪ್ರತಿ ಪೆÇೀಲಿಂಗ್ ಸ್ಟೇಷನ್ ನ ಮತ ಎಣಿಕೆಯ ಗಣನೆ ದಾಖಲೆ ನಡೆಸುವ ನಿಟ್ಟಿನಲ್ಲಿ ಟ್ರೇಡ್ ಸಾಫ್ಟ್ ವೇರ್ ನಲ್ಲಿ ಕವಂಟಿಂಗ್ ಸ್ಲಿಪ್ ಮುಂಗಡವಾಗಿಯೇ ಡೌನ್ ಲೋಡ್ ನಡೆಸಿ ಪ್ರಿಂಟ್ ಪಡೆಯಬೇಕು. ಮತ ಎಣಿಕೆ ಪೂರ್ತಿಗೊಂಡ ತಕ್ಷಣ ಎಣಿಕೆ ಮೇಲ್ವಿಚಾರಕರು ಅದರಲ್ಲಿ ಫಲಿತಾಂಶ ದಾಖಲುಗೊಳಿಸಬೇಕು. ನಂತರ ಸ್ಲಿಪ್ ಡೇಟಾ ಅಪೆÇ್ಲೀಡಿಂಗ್ ಸೆಂಟರ್ ಗೆ ತಲಪಿಸಬೇಕು. ಡೇಟಾ ಅಪೆÇ್ಲೀಡಿಂಗ್ ಸೆಂಟರ್ ನಲ್ಲಿ ಲಭಿಸುವ ಕೌಂಟಿಂಗ್ ಸ್ಲಿಪ್ ಫಾರಂನ ಮಾಹಹಿತಿಗಳನ್ನು ತಕ್ಷಣ ಟ್ರೇಡ್ ನಲ್ಲಿ ನಿಖರವಾಗಿ ಎಂಟ್ರಿ ನಡೆಸಬೇಕಿದ್ದು, ಅದರ ಖಚಿತತೆಯನ್ನು ಎಣಿಕೆ ಮೇಲ್ವಿಚಾರಕರು ನಡೆಸುವರು. ಮತೆಣಿಕೆಯ ನಂತರ ತ್ರಿಸ್ತರ ಪಂಚಾಯತ್ ಗಳ ವಿಚಾರದಲ್ಲಿ ಸಂಗ್ರಹಿಸಬೇಕಾದ ದಾಖಲೆಗಳು ಮತ್ತು ಕಂಟ್ರೋಲ್ ಯೂನಿಟ್ ನ ಡಿಟಾಚ್ ಬಿಲ್ ಮೆಮರಿ ಮಾಡೆಲ್ ಸಂಬಮಧಪಟ್ಟ ಟ್ರಷರಿಗಳಲ್ಲಿ ಸಂರಕ್ಷಿಸಲಾಗುವುದು. ಆದರೆ ನಗರಸಭೆಗಳ ವಿಚಾರದಲ್ಲಿ ದಾಖಲೆಗಳ ಜೊತೆಗೆ ವಿದ್ಯುನ್ಮಾನ ಮತಯಂತ್ರ ಸಹಿತ ಟ್ರಷರಿಗಳಲ್ಲಿ ಸಂರಕ್ಷಿಸಲಾಗುವುದು. ವಿಶೇಷ ಅಂಚೆ ಮತಪತ್ರದ ಜೊತೆಗಿನ ದಾಖಲೆಗಳು ಇತ್ಯಾದಿಗಳನ್ನು ಇತರ ದಾಖಲೆಗಳು ಜೊತೆ ಇರಿಸಲಾಗುವುದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries