ಕೊಚ್ಚಿ: ನಾಯಿಯ ಕುತ್ತಿಗೆಗೆ ಹಗ್ಗದಿಂದ ಕಟ್ಟಿ ಟ್ಯಾಕ್ಸಿಯ ಹಿಂಭಾಗಕ್ಕೆ ಕಟ್ಟಿಹಾಕಿ ರಸ್ತೆಯಲ್ಲಿ ಎಳೆದೊಯ್ದು ಹಿಂಸೆಗೊಳಪಡಿಸಿದ ರಾಕ್ಷಸೀಯ ಕ್ರೂರ ಪ್ರವೃತ್ತಿ ನಿನ್ನೆ ನಡೆದಿದೆ. ಟ್ಯಾಕ್ಸಿ ಚಾಲಕನನ್ನು ಚೆಂಗಮನಾಡು ಪೆÇಲೀಸರು ಬಂಧಿಸಿದ್ದಾರೆ. ಈ ಘಟನೆ ಎರ್ನಾಕುಳಂ ಮತ್ತು ಚೆಂಗಮನಾಡು ಅತಾನಿ ಪ್ರದೇಶದಲ್ಲಿ ನಡೆದಿದೆ.
ಕಾರನ್ನು ಹಿಂಬಾಲಿಸುತ್ತಿದ್ದ ಅಖಿಲ್ ಎಂಬವರು ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಆಸ್ಪತ್ರೆಯಿಂದ ಹಿಂತಿರುಗುವಾಗ ಈ ಘಟನೆ ಗಮನಕ್ಕೆ ಬಂದಿತು. ಕಾರಿನ ಹಿಂಭಾಗಕ್ಕೆ ಶ್ವಾನವನ್ನು ಕಟ್ಟಿ ಹಾಕಿ ಎಳೆದೊಯ್ಯುವುದನ್ನು ನೋಡಿ ತೀವ್ರ ಕಳವಳಗೊಂಡಿದ್ದೆ ಎಂದು ಅಖಿಲ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ನಾಯಿಯನ್ನು ಕಟ್ಟಿಹಾಕಿ ಎಳೆದೊಯ್ಯುವ ವಿಡಿಯೋ ಹರಡಿದ ಹಿನ್ನೆಲೆಯಲ್ಲಿ ಚೆಂಗಮನಾಡು ಪೆÇಲೀಸರು ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿದ್ದಾರೆ.
ಕಾರು ಚಾಲಕ ಮತ್ತು ನಾಯಿಯ ಮಾಲಕನೂ ಆಗಿರುವ ಯೂಸುಫ್ ವಿರುದ್ಧ ಐಪಿಸಿಯ ಸೆಕ್ಷನ್ 428 ಮತ್ತು 429 ಮತ್ತು ನೆಡುಂಬಸ್ಸೆರಿ ಪುತ್ತನ್ವೆಲಿಕರ ಚಲಕ ಕಾರ್ನರ್ ಹೌಸ್ ನ ಈತನ ಮೇಲೆ ಪ್ರಾಣಿಗಳಿಗೆ ಕ್ರೌರ್ಯ ತಡೆಗಟ್ಟುವಿಕೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಾನು ಪ್ರೀತಿಯಿಂದ ಸಾಕಿದ ಶ್ವಾನದ ಬಗ್ಗೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಲಾಗಿತ್ತು. ಕೊನೆಗೆ ಗತ್ಯವಿಲ್ಲದೆ ಬೇರೆಡೆ ಸಾಗಿಸಲು ಕಾರೊಳಗೆ ಶ್ವಾನವನ್ನು ಹತ್ತಿಸಲು ಪ್ರಯತ್ನಿಸಿ ಕೈಸೋತು ಕೊನೆಗೆ ಹತಾಶನಾಗಿ ಹೀಗೆ ಮಾಡಬೇಕಾಯಿತೆಂದು ತಿಳಿಸಿರುವ ಯೂಸುಫ್ ನ ವಾಹನ ಚಲಾವಣಾ ಪರವಾನಿಗೆಯನ್ನು ರದ್ದುಪಡಿಸಲಾಗಿದೆ.