ಮಂಜೇಶ್ವರ: ಗುವೆದಪಡ್ಪು ಅಂಗನವಾಡಿಯಲ್ಲಿ ನಿರ್ಮಲ ಸಂಗಮ ಕಾರ್ಯಕ್ರಮ ಜರಗಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಕ್ಷಕ ಅಶೋಕ ಕೊಡ್ಲಮೊಗರು "ನಿರ್ಮಲ ಪರಿಸರ ನಮ್ಮ ಧ್ಯೇಯ" ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣದಲ್ಲಿ ಮಾತನಾಡಿ, ಸ್ವಚ್ಚ ಸುಂದರ ಪರಿಸರವು ಉತ್ತಮ ಆರೋಗ್ಯದ ಮೂಲವಾಗಿರುತ್ತದೆ. ಇಂತಹ ಪರಿಸರದಿಂದ ಮಾನಸಿಕ ದೃಢತೆ ಹಾಗೂ ಆರೋಗ್ಯಪೂರ್ಣ ಜೀವನ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಗುವೆದಪಡ್ಪು ಅಂಗನವಾಡಿ ಕಾರ್ಯಕಾರಿ ಸಮಿತಿ ಸದಸ್ಯ ಮಧುಸೂದನ್ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಗುವೆದಪಡ್ಪು, ಗಂಗಮ್ಮ ಉಪಸ್ಥಿತರಿದ್ದರು.
ಬಳಿಕ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಯಶ್ರೀ ಕೊಡ್ಲಮೊಗರು, ಲಾವಣ್ಯ ಗುವೆದಪಡ್ಪು, ಹಝ್ರತ್ ಬಾನು, ಹಪ್ರೀನ ಬಾನು ವಿಜೇತರಾದರು. ಅಂಗನವಾಡಿ ಕಾರ್ಯಕರ್ತೆ ಸರಿತಾ ದೈಗೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಮತಿ ಕತ್ತರಿಕೋಡಿ ಸಹಕರಿಸಿದರು.