ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ಸಂಭವ ಕಡಿಮೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ದೇಶದಲ್ಲಿ ಕೊರೋನಾ ಸಂಖ್ಯೆ ಒಂದು ಕೋಟಿ ಗಡಿ ದಾಟಿದೆ. ಆದರೆ ದೈನಂದಿನ ಪ್ರಕರಣಗಳ ಸಂಖ್ಯೆ ಮತ್ತು ಸಾವುನೋವುಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಕೊರೋನಾ ಎರಡನೇ ಅಲೆ ಸಂಭವಿಸುವ ಸಾಧ್ಯತೆ ಕಡಿಮೆ ಇಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಖ್ಯಾತ ವೈರಾಲಜಿಸ್ಟ್ ಡಾ. ಶಾಹಿದ್ ಜಮೀಲ್ ಮಾತನಾಡಿ, ಸೆಪ್ಟೆಂಬರ್ ಮಧ್ಯದಲ್ಲಿ ಗರಿಷ್ಠ ಮಟ್ಟದಿಂದ ಭಾರತದಲ್ಲಿ ದೈನಂದಿನ ಪ್ರಕರಣಗಳು ಇಳಿಮುಖವಾಗುತ್ತಿದೆ. ಸೆಪ್ಟೆಂಬರ್ ಮಧ್ಯದಲ್ಲಿ ದಿನಕ್ಕೆ 93,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು ಅದಕ್ಕೆ ಹೋಲಿಸಿದರೆ ಇದೀಗ ದೇಶದಲ್ಲಿ ಪ್ರತಿದಿನ ಸುಮಾರು 25,500 ಪ್ರಕರಣಗಳು ಮಾತ್ರ ವರದಿಯಾಗುತ್ತಿದೆ. ಇದನ್ನು ನೋಡಿದರೆ ದೇಶದಲ್ಲಿ ಕೊರೋನಾ ತನ್ನ ಶಕ್ತಿ ಕಳೆದುಕೊಳ್ಳುತ್ತಿದೆ ಎಂದಿದ್ದಾರೆ.
ಕೊರೋನಾ ಸಂಭವನೀಯ ಎರಡನೇ ಅಲೆ ಬಗ್ಗೆ ಕೇಳಿದಾಗ, ಖ್ಯಾತ ಕ್ಲಿನಿಕಲ್ ವಿಜ್ಞಾನಿ ಡಾ. ಗಗನ್‌ದೀಪ್ ಕಾಂಗ್ ಅವರು ಹರಡುವಿಕೆಯೂ ಮೊದಲಿಗೆ ಕಂಡಷ್ಟು ವೇಗವಾಗಿ ಹರಡುತ್ತಿಲ್ಲ. ಹೀಗಾಗಿ ಎರಡನೇ ಅಲೆ ಸಂಭವ ಕಡಿಮೆ ಎಂದು ಅಭಿಪ್ರಾಯಪಟ್ಟರು.
ಪ್ರಸರಣ ಆಗದಂತೆ ನಾವು ಸ್ವಲ್ಪ ಮಟ್ಟದ ರಕ್ಷಣೆಯನ್ನು ಹೊಂದಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ಸಾಕು ಎಂದು ನಾನು ಭಾವಿಸುತ್ತೇನೆ. ಮೊದಲ ಬಾರಿಗೆ ನೋಡಿದಷ್ಟು ವೇಗವಾಗಿ ಮತ್ತು ಗರಿಷ್ಠವು ಹೇರಿಕೆ ಪ್ರಮಾಣದಲ್ಲಿರುವುದಿಲ್ಲ. ಸದ್ಯಕ್ಕೆ ಸಮಸ್ಯೆ ದೂರವಾಗಲಿಲ್ಲ. ಆದರೆ ಅದು ಸಾಮೂಹಿಕವಾಗಿ ಹರಡುತ್ತಿಲ್ಲ. ಹೀಗಾಗಿ ಯೂರೋಪಿಯನ್ ರಾಷ್ಟ್ರಗಳಲ್ಲಿ ಕಂಡುಬರುವಂತೆ ನಾವು ಎರಡನೇ ಅಲೆ ನೋಡುತ್ತೇವೆ ಎಂದು ನಾನು ಭಾವಿಸುವುದಿಲ್ಲ ಎಂದು ಕಾಂಗ್ ಹೇಳಿದರು.