ಕಾಸರಗೋಡು: ಕಾಸರಗೋಡು ಜಿಲ್ಲೆಯ ಜಲಾಶಯಗಳಲ್ಲಿ ಗಣನೀಯ ರೀತಿ ಜಲಸಾಂದ್ರತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದುರಂತ ನಿವಾರಣೆ ಕಾಯಿದೆ 30(2) 5 ಪ್ರಕಾರ ಜಿಲ್ಲೆಯ ವಿವಿಧ ನದಿಗಳು, ತೋಡುಗಳು, ತೊರೆಗಳು ಸಹಿತ ಜಲಾಶಯಗಳಲ್ಲಿ ವಿವಿಧ ಇಲಾಖೆಗಳು ನಿರ್ಮಿಸಿರುವ ವಿ.ಸಿ.ಬಿಗಳು, ಚೆಕ್ ಡಾಂ ಗಳು, ರೆಗ್ಯುಲೇಟರ್ ಗಳು ಬಂಡ್ಗಖು ಇತ್ಯಾದಿಗಳ ಶಟರ್ ಗಳನ್ನು ತುರ್ತಾಗಿ ಮುಚ್ಚುಗಡೆ ನಡೆಸುವಂತೆ ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ಪ್ರಕಟಿಸಿರುವರು.