ಕೊಚ್ಚಿ: ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡುವಂತೆ ಕೇಳಿದ ಸ್ವಪ್ನಾ ಸುರೇಶ್ ಅವರ ಆಡಿಯೋ ರೆಕಾರ್ಡಿಂಗ್ ಪ್ರಕರಣದ ಹಿಂದೆ ಪೋಲೀಸರು ಇದ್ದಾರೆ ಎಂದು ಕೇಂದ್ರ ಸಂಸ್ಥೆಗಳು ತಿಳಿಸಿವೆ.
ಪ್ರಸ್ತುತ ಕೇಂದ್ರ ಸಂಸ್ಥೆಗಳ ವಶದಲ್ಲಿದ್ದರೂ, ಕೇರಳ ಪೋಲೀಸರು ಸ್ವಪ್ನಾ ಸುರೇಶ್‍ಗೆ ಕಾವಲು ಕಾಯುತ್ತಿದ್ದಾರೆ. ಭದ್ರತಾ ಉಸ್ತುವಾರಿ ವಹಿಸಿಕೊಂಡಿರುವ ಮಹಿಳಾ ಪೋಸರೊಬ್ಬರು ವಿಶೇಷ ಶಾಖಾ ಅಧಿಕಾರಿಯನ್ನು ಕರೆದು ಫೆÇೀನ್ ನ್ನು ಧ್ವನಿಮುದ್ರಿಸಲು ಸ್ವಪ್ನಾಳಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ, ಅಧಿಕಾರಿಯು ಫೆÇೀನ್‍ನಲ್ಲಿ ಮೊದಲೇ ಸೂಚಿಸಿದ ಕ್ರಮಗಳಂತೆ ಸ್ವಪ್ನಾಳ ಸಂಭಾಷಣೆಯನ್ನು ರೆಕಾರ್ಡ್ ಮಾಡುತ್ತಿದ್ದ. ಆದರೆ, ವಿಶೇಷ ಶಾಖಾ ಅಧಿಕಾರಿ ಯಾರೆಂದು ಸ್ವಪ್ನಾ ಇನ್ನೂ ತಿಳಿಸಿಲ್ಲ.
ಕಸ್ಟಮ್ಸ್ ಮತ್ತು ಇತರ ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಯನ್ನು ತಪ್ಪಿಸುವ ಪ್ರಜ್ಞಾಪೂರ್ವಕ ಪ್ರಯತ್ನಗಳು ನಡೆದಿವೆ ಎಂದು ನಿರ್ಣಯಿಸಲಾಗಿದೆ. ಈ ವಿಷಯಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವುದಾಗಿ ಏಜೆನ್ಸಿಗಳು ಹೇಳಿವೆ. ಆದರೆ, ಅತ್ತಕ್ಕುಲಂಗರ ಜೈಲಿನಲ್ಲಿ ಸ್ವಪ್ನಾಳ ಧ್ವನಿ ಸಂದೇಶ ದಾಖಲಾತಿ ನಡೆಸಿಲ್ಲ ಎಂದು ಜೈಲು ಇಲಾಖೆ ವರದಿ ತಿಳಿಸಿದೆ.