ಕೋಝಿಕ್ಕೋಡ್: ಕೇಸರಿ ಮಾಧ್ಯಮ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಕೇಸರಿ ಭವನವನ್ನು ಆರ್‍ಎಸ್‍ಎಸ್ ಸರಸಂಘ ಚಾಲಕ್ ಡಾ. ಮೋಹನ್ ಭಾಗವತ್ ಮಂಗಳವಾರ ಕೋಝಿಕ್ಕೋಡಿನಲ್ಲಿ ಉದ್ಘಾಟಿಸಿದರು. ಕೋಝಿಕ್ಕೋಡ್ ನ ಚಲಪ್ಪುರಂನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಭದ್ರಾದೀಪಂ ಬೆಳಗಿ ಉದ್ಘಾಟಿಸಲಾಯಿತು. ಕೋಲತ್ತೂರ್ ಅದ್ವೈತ ಆಶ್ರಮ ಧರ್ಮಾಧಿಕಾರಿ ಚಿದಾನಂದಪುರಿ ಸ್ವಾಮಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಅಖಿಲ ಭಾರತ ಪ್ರಮುಖ್ ಆರ್.ಹರಿ, ಮಲೆಯಾಳ ಮಾಧ್ಯಮ ಮಾತೃಭೂಮಿಯ ಮಾಜಿ ಸಂಪಾದಕ ಎಂ. ಕೇಶವ್ ಮೆನನ್, ಶಾಸಕ ಒ. ರಾಜಗೋಪಾಲ್, ಪ್ರಜ್ಞಾ ಪ್ರವಾಹ್ ರಾಷ್ಟ್ರೀಯ ಸಂಯೋಜಕ ಜೆ.ನಂದಕುಮಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ ವಿದ್ವಾಂಸ ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ಪಿ.ಆರ್.ನಾಥನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಹಿಂದೆ ಕೇಸರಿ ಪಬ್ಲಿಕೇಶನ್ ಮತ್ತು ಕುರುಕ್ಷೇತ್ರ ಪುಸ್ತಕಗಳು ಪ್ರಕಟಿಸಿದ ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿತ್ತು. ಕೇಸರಿಗಾಗಿ ಖ್ಯಾತ ಗೀತರಚನೆಕಾರ ಕೈತಪ್ರಂ ದಾಮೋದರನ್ ಬರೆದಿರುವ ಹಾಡನ್ನು ಚಲನಚಿತ್ರ ಹಿನ್ನೆಲೆ ಗಾಯಕ ಕೈತಪ್ರಂ ದೀಪಾಂಕುರನ್ ಹಾಡಿದ್ದಾರೆ. ಸಮಾರಂಭದಲ್ಲಿ ಖ್ಯಾತ ಗೀತರಚನೆಕಾರ ಕೈತಪ್ರಂ ದಾಮೋದರನ್ ನಂಬೂತಿರಿ ಮತ್ತು ಪ್ರಸಿದ್ಧ ಸೋಪಾನ ಸಂಗೀತಗಾರ ಞರಾಲತ್ ಹರಿಗೋವಿಂದನ್ ಅವರನ್ನು ಗೌರವಿಸಲಾಯಿತು.
ಬೆಳಿಗ್ಗೆ ಪಿಟೀಲು ಸಂಗೀತ ಕಚೇರಿಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಞರಾಲತ್ ಹರಿಗೋವಿಂದನ್ ಅವರ ರಂಗ ಸಂಗೀತದ ನಂತರ ಉದ್ಘಾಟಿಸಲಾಯಿತು. ಕೇಸರಿ ಪ್ರಧಾನ ಸಂಪಾದಕ ಡಾ. ಎನ್.ಆರ್ ಮಧು ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಪೂಜೆ ಮತ್ತು ವಂದೇ ಮಾತರಂ ಆಲಾಪನೆಯ ಬಳಿಕ ಹಿಂದೂಸ್ತಾನ್ ಪ್ರಕಾಶನ್ ಟ್ರಸ್ಟ್ ಪ್ರಬಂಧಕ ನ್ಯಾಯವಾದಿ. ಶ್ರೀಕುಮಾರ್ ಸ್ವಾಗತಿಸಿದರು.