ತಿರುವನಂತಪುರ: ಕೋವಿಡ್ ಹಿನ್ನೆಯಾದ್ದರಿಂದ ಸ್ಥಳಿಯಾಡಳಿತ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯಾವುದೇ ಸಾರ್ವಜನಿಕ-ರಾಜಕೀಯ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ ಎಂದು ಸಚಿವ ಕಡಗಂಪಳ್ಳಿ ಸುರೇಂದ್ರನ್ ತಿಳಿಸಿದರು. ಅಭಿವೃದ್ದಿ ಸಂಬಂಧಿ ವಿಷಯಗಳಿಗೆ ಮಾನದಂಡವಾಗಿ ಸ್ಥಳೀಯಾಡಳಿತ ಚುನಾವಣೆ ಸಂಯೋಜನೆಗೊಂಡಿರುವುದು ವಿಶೇಷತೆಯಾಗಿದೆ. ಎಲ್ಲೆಡೆ ಎಲ್ ಡಿ ಎಫ್ ಬಹುಮತದಿಂದ ಗೆಲ್ಲಲಿದೆ ಸಚಿವರು ಭರವಸೆ ವ್ಯಕ್ತಪಡಿಸಿದರು. ಯಾವುದೇ ವಿವಾದಗಳೂ ಜನಸಾಮಾನ್ಯರ ಮೇಲೆ ಪರಿಣಾಮ ಬೀರದೆಂದು ಅವರು ತಿಳಿಸಿದರು.