ನವದೆಹಲಿ: ಆಪಲ್ ನಿಂದ ಡಿಸೆಂಬರ್ 8ನೇ ತಾರೀಕು ಏರ್ ಪಾಡ್ಸ್ ಮ್ಯಾಕ್ಸ್ ವೈರ್ ಲೆಸ್ ಹೆಡ್ ಫೋನ್ ಗಳನ್ನು ಬಿಡುಗಡೆ ಮಾಡಲಾಗಿದೆ. ಯುಎಸ್ ನಲ್ಲಿ ಏರ್ ಪಾಡ್ಸ್ ಮ್ಯಾಕ್ಸ್ 549 ಅಮೆರಿಕನ್ ಡಾಲರ್ ಗೆ ಡಿಸೆಂಬರ್ 8ರಿಂದ ಆರ್ಡರ್ ಮಾಡಬಹುದಾಗಿದ್ದು, 15ನೇ ತಾರೀಕಿನಿಂದ ತಲುಪಿಸಲು ಆರಂಭಿಸಲಾಗುತ್ತದೆ.
ಭಾರತದಲ್ಲಿ ಇದರ ಬೆಲೆ 59,900 ರುಪಾಯಿಗೆ ದೊರೆಯಲಿದೆ ಎಂದು ಖಾತ್ರಿ ಪಡಿಸಲಾಗಿದೆ. ಏರ್ ಪಾಡ್ಸ್ ಕಸ್ಟಮ್ ಅಕೌಸ್ಟಿಕ್ ಡಿಸೈನ್, ಎಚ್ 1 ಚಿಪ್ಸ್, ನಾಯ್ಸ್ ಕ್ಯಾನ್ಸಲೇಷನ್ ಮೊದಲಾದ ಫೀಚರ್ ಗಳನ್ನು ಒಳಗೊಂಡಿದೆ. ಸ್ಪೇಸ್ ಗ್ರೇ, ಸಿಲ್ವರ್, ಆಕಾಶ ನೀಲಿ, ಹಸಿರು ಮತ್ತು ಗುಲಾಬಿ ಬಣ್ಣದ ಐದು ಮೆಟಾಲಿಕ್ ಶೇಡ್ ನಲ್ಲಿ ದೊರೆಯಲಿದೆ.
ಏರ್ ಪಾಡ್ಸ್ ಮ್ಯಾಕ್ಸ್ ನಿಂದ ಆಪಲ್ ನ ಡಿವೈಸ್ ಗಳು ಐಒಎಸ್ 14.3 ಅಥವಾ ಅದಕ್ಕಿಂತ ಮೇಲ್ಪಟ್ಟಿದ್ದು, ಐಪ್ಯಾಡ್ ಒಎಸ್ 14.3 ಅಥವಾ ನಂತರದ್ದು, ಮ್ಯಾಕ್ ಒಎಸ್ Big Sur 11.1 ಅಥವಾ ಮೇಲ್ಪಟ್ಟು, ವಾಚ್ ಒಎಸ್ 7.2 ಅಥವಾ ಮೇಲ್ಪಟ್ಟು, ಅಥವಾ ಟಿವಿಒಎಸ್ 14.3 ಅಥವಾ ಮೇಲ್ಪಟ್ಟದ್ದಕ್ಕೆ ಸಪೋರ್ಟ್ ಮಾಡುತ್ತದೆ.