ತಿರುವನಂತಪುರ: ತಿರುವಾಂಕೂರ್ ದೇವಸ್ವಂ ಮಂಡಳಿಯಡಿಯಲ್ಲಿರುವ ದೇವಾಲಯಗಳು ಈ ಋತುವಿನಲ್ಲಿ ಉತ್ಸವವನ್ನು ನಡೆಸಲು ನಿರ್ಧರಿಸಿದೆ. ಆದರೆ ಗೌಜಿ ಗದ್ದಲಗಳನ್ನು ಕೈಬಿಡಲಾಗುತ್ತದೆ. ಆಚರಣೆಗಳಿಲ್ಲದೆ ಮಂಡಳಿಯು ಬೇರಾವುದೇ ಸಮಾರಂಭಗಳನ್ನು ನಡೆಸದಿರಲು ನಿರ್ಧರಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಮಾತ್ರ ಉತ್ಸ ಸೀಮಿತಗೊಳಿಸಲಾಗಿದೆ. ವಿವಿಧ ವಿಧಾನಗಳ ಭಾಗವಾಗಿ ಮನೆಮನೆ ಸಂದರ್ಶನ, ಪ್ರದರ್ಶನಗಳನ್ನು ನಿಯಂತ್ರಿಸಲಾಗುತ್ತದೆ. ಇಂತಹ ಗೌಜಿಗಳಿಂದ ಮುಕ್ತರಾಗಿ ಉತ್ಸವ ಆಚರಿಸಲು ದೇವಸ್ವಂ ಮಂಡಳಿಯು ನಿರ್ದೇಶನ ನೀಡಿದೆ.
ಪ್ರಸ್ತುತ, ಭಕ್ತರಿಗೆ ಕಟ್ಟುನಿಟ್ಟಿನ ನಿಯಂತ್ರಣದಲ್ಲಿರುವ ದೇವಾಲಯಗಳಿಗೆ ಪ್ರವೇಶಿಸಲು ಅವಕಾಶವಿದೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರವೇಶಕ್ಕೆ ಅನುಮತಿ ನೀಡಿಲ್ಲ.