ಕುಂಬಳೆ: ತ್ರಿಸ್ತರ ಪಂಚಾಯತಿ ಚುನಾವಣಾ ಪ್ರಚಾರಾರ್ಥ ಗುರುವಾರ ಕುಂಬಳೆಯಲ್ಲಿ ಬಿಜೆಪಿ ವತಿಯಿಂದ ಸಾರ್ವಜನಿಕ ಸಭೆ ನಡೆಯಿತು.
ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಮಾತನಾಡಿದ ಅವರು ವಂಚನೆ,ಭ್ರಷ್ಟಾಚಾರ,ಬೃಹತ್ ಹಗರಣಗಳಿಂದ ಜೈಲು ಸೇರಲು ಸಿದ್ದವಾಗಿರುವ ಕೇರಳದ ಎಡ,ಬಲ ಒಕ್ಕೂಟಗಳನ್ನು ಹಿಮ್ಮೆಟ್ಟಿಸಿ ಅಭಿವೃದ್ಧಿ ಪರ ಬಿಜೆಪಿ- ಎನ್ ಡಿ ಎ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕುಂಬಳೆ ಪಂಚಾಯತಿ ಬಿಜೆಪಿ ಸಮಿತಿ ಅಧ್ಯಕ್ಷ ಸುಧಾಕರ ಕಾಮತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ, ಕ್ಯಾಂಪೆÇ್ಕೀ ನಿರ್ದೇಶಕ ಸುರೇಶ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತಿ ಕುಂಬಳೆ ಡಿವಿಶನ್ ಅಭ್ಯರ್ಥಿ ಸ್ನೇಹಲತ ದಿವಾಕರ್, ಮಂಜೇಶ್ವರ ಮಂಡಲ ಪ್ರ.ಕಾರ್ಯದರ್ಶಿ ಮುರಳೀಧರ ಯಾದವ್, ರಮೇಶ್ ಭಟ್, ವಿನೋದ್ ಕಡಪ್ಪುರ, ರಾಮಪ್ಪ ಮಂಜೇಶ್ವರ, ಹರಿಶ್ಚಂದ್ರ ಮಂಜೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ಶಂಕರ ಆಳ್ವ ಸ್ವಾಗತಿಸಿ, ಬಿಜೆಪಿ ಪಂಚಾಯತಿ ಸಮಿತಿ ಕಾರ್ಯದರ್ಶಿ ಜಿತೇಶ್ ನಾಯ್ಕಾಪು ವಂದಿಸಿದರು.