ಕಾಸರಗೋಡು: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲೂ ಸೋಮವಾರ ವಿವಿಧ ಕಾರ್ಯಕ್ರಮಗಳು ಜರುಗಿದುವು.
ಎನ್.ವೈ.ಕೆ. ಸುರಕ್ಷಾ ಪ್ರಾಜೆಕ್ಟ್, ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ಜಂಟಿ ವತಿಯಿಂದ ನೂತನ ಬಸ್ ನಿಲ್ದಾಣ ಬಳಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಟಿ.ಕೆ.ಆಮಿನಾ ರೆಡ್ ರಿಬ್ಬನ್ ವಿತರಣೆ ನಡೆಸಿ ಉದ್ಘಾಟಿಸಿದರು. ಜಿಲ್ಲಾ ಟಿ.ಬಿ., ಎಚ್.ಐ.ವಿ. ಸಂಚಾಲಕ ರತೀಶ್ ವಿ. ಅಧ್ಯಕ್ಷತೆ ವಹಿಸಿದ್ದರು. ಐ.ಸಿ.ಡಿ.ಎಸ್. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್ ಏಡ್ಸಸ ದಿನ ಸಂದೇಶ ನೀಡಿದರು. ಡಿ.ಎನ್.ಎಸ್.ಎ. ವಿಭಾಗ ಅಧಿಕಾರಿ ಕೆ.ದಿನೇಶ್, ಆರೋಗ್ಯ ವಾಣಿ ನಿರ್ದೇಶಕ ಮೋಹನನ್ ಮಾಂಗಾಡ್, ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸೂನಾ ಎಸ್.ಚಂದ್ರನ್, ಕಾಸರಗೋಡು ಜನಮೈತ್ರಿ ಪೆÇಲೀಸ್ ಅಧಿಕಾರಿ ಮಧು ಕಾರಕಡವತ್, ಕುಂuಟಿಜeಜಿiಟಿeಜಕೃಷ್ಣನ್ ಉಪಸ್ಥಿತರಿದ್ದರು. ಎನ್.ವೈ.ಕೆ. ಸುರಕ್ಷಾ ಪ್ರಾಜೆಕ್ಟ್ ಮೆನೆಜರ್ ಪಿ.ಶ್ರೀಜಿತ್ ಸ್ವಾಗತಿಸಿದರು. ಔಟ್ ರೀಚ್ ವರ್ಕರ್ ನಾರಾಯಣಪೆರಡಾಲ ವಂದಿಸಿದರು.