ಮಂಜೇಶ್ವರ: ಹೊಟೇಲ್ ಕಾರ್ಮಿಕರಾದ ಶ್ರೀನಿವಾಸ ಕುಲಾಲ್ ಸಜಿಪ ಮೂಡ ರವರು ವಾಹನ ಅಪಘಾತಕ್ಕೀಡಾಗಿ ಹಲವು ವರ್ಷ ಚಿಕಿತ್ಸೆ ಪಡೆದು ಇದೀಗ ಪ್ರಜ್ಞೆ ತಪ್ಪುವ ರೋಗ ತಗಲಿ ಕುಟುಂಬ ಆದಾಯವಿಲ್ಲದೆ ಸಂಕಷ್ಟದಲ್ಲಿದೆ.
ಕುಟುಂಬಕ್ಕೆ ಸಹಾಯ ಎಂಬ ನೆಲೆಯಲ್ಲಿ ಸ್ಪಂದನ ಟ್ರಸ್ಟ್ ಇದರ 50 ನೇ ಸೇವಾ ಯೋಜನೆಯನ್ನು ಸ್ಪಂದನ ಸಂಸ್ಥೆಯ ಕಚೇರಿಯಲ್ಲಿ ಶ್ರೀನಿವಾಸ ಕುಲಾಲ್ ಅವರ ಪತ್ನಿಗೆ ಚೆಕ್ (20,000 ರೂ.) ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸೌಮ್ಯ ಮೋಹನ್ ಧರ್ಮನಗರ, ಸತ್ಯನಾರಾಯಣ ಭಟ್ ಪಜ್ವ, ಪ್ರಭಾಕರ್ ಮಜೀರ್ಪಳ್ಳ, ನವೀನ್ ವರ್ಕಾಡಿ ಪಾಡ, ಸುಧೀರ್ ರಂಜನ್ ದೈಗೋಳಿ, ತೇಜ ಪ್ರಕಾಶ್ ಕೋಳ್ಯೂರು, ಲೋಕೇಶ್ ಕೋಳ್ಯೂರು ಉಪಸ್ಥಿತರಿದ್ದರು.