ತಿರುವನಂತಪುರಂ: ಗೃಹ ಕಾರ್ಮಿಕರ ಸ್ಥಿತಿ ಆತಂಕಕಾರಿಯಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ.ಜೋಸೆಫೀನ್ ಹೇಳಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷರು ಕೊಚ್ಚಿ ಮರೀನ್ ಡ್ರೈವ್‍ನಲ್ಲಿ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
ಕೇರಳದ ಮನೆಕೆಲಸಗಾರರಲ್ಲಿ ಹೆಚ್ಚಿನವರು ಮಹಿಳೆಯರು. ಅವರ ಆರೋಗ್ಯ ಮತ್ತು ಉದ್ಯೋಗ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವುದು ಅವರನ್ನು ನೇಮಿಸಿಕೊಳ್ಳುವವರ ಕರ್ತವ್ಯವಾಗಿದೆ. ಆದರೆ ಮನೆಕೆಲಸಗಾರರ ಸ್ಥಿತಿ ಆತಂಕಕಾರಿಯಾಗಿದೆ ಎಂದಿರುವರು.
ಕಳೆದ ವಾರ ಮಹಿಳಾ ಆಯೋಗವು ಸ್ವಯಂಪ್ರೇರಣೆಯಿಂದ ಫ್ಲಾಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಕೊಚ್ಚಿ ನಗರ ಪೆÇಲೀಸ್ ಆಯುಕ್ತರಿಂದ ವರದಿ ಕೋರಿತ್ತು.
ಡಿಸೆಂಬರ್ 4 ರಂದು ಕೊಚ್ಚಿ ಮರೀನ್ ಡ್ರೈವ್‍ನ ಫ್ಲ್ಯಾಟ್‍ನಿಂದ ಬಿದ್ದು ಗಂಭೀರ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಗೃಹಿಣಿ ಮೃತಪಟ್ಟಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅವರು ಮೃತಪಟ್ಟರು.
ತಮಿಳುನಾಡಿನ ಸೇಲಂ ಮೂಲದ ಕುಮಾರಿ (55) ಮರೀನ್ ಡ್ರೈವ್‍ನ ಲಿಂಕ್ ಹರೈಸನ್ ಫ್ಲ್ಯಾಟ್‍ನಿಂದ ಜಾರಿಬಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಕುಮಾರಿಯ ಪತಿ ಶ್ರೀನಿವಾಸನ್ ಅವರು ಫ್ಲ್ಯಾಟ್‍ನ ಮಾಲೀಕ ವಕೀಲ ಇಮ್ತಿಯಾಜ್ ಅಹ್ಮದ್ ವಿರುದ್ಧ ದೂರು ನೀಡಿದ್ದರು. ಕುಮಾರಿಯನ್ನು ತನ್ನ ವಕೀಲರು ಮನೆಯೊಳಗೆ ಬಂಧಿಸಿ ಕಿರುಕುಳ ನೀಡುತ್ತಿದ್ದರು ಎಂದು ಶ್ರೀನಿವಾಸನ್ ಪೋಸರಿಗೆ ತಿಳಿಸಿದ್ದರು.