ತಿರುವನಂತಪುರ: ಪತ್ರಕರ್ತ ಎಸ್.ವಿ.ಪ್ರದೀಪ್ ತಿರುವನಂತಪುರದಲ್ಲಿ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ತಿರುವನಂತಪುರಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರದೀಪ್ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ನಡೆದಿದೆ. ನೇಮಂ ಕರೈಕಮಂಟಪದಲ್ಲಿ ಈ ಅಪಘಾತ ಸಂಭವಿಸಿದೆ. ಕರೈಕ್ಕಮಂಡಪಂ ಸಿಗ್ನಲ್ ಬಳಿ ಪ್ರದೀಪ್ ಅವರ ದ್ವಿಚಕ್ರ ವಾಹನವು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ.
ಅಪಘಾತಕ್ಕೀಡಾದ ವಾಹನ ನಿಲ್ಲದೆ ಹೊರಟುಹೋಗಿದೆ. ಅಪಘಾತಕ್ಕೆ ಕಾರಣವಾದ ವಾಹನವನ್ನು ಇನ್ನೂ ಗುರುತಿಸಲಾಗಿಲ್ಲ. ಪ್ರದೀಪ್ ಜೈಹಿಂದ್, ಮೀಡಿಯಾ ಒನ್, ನ್ಯೂಸ್ 18, ಕೈರಳಿ ಮತ್ತು ಮಂಗಳಂ ಸುದ್ದಿ ಚಾನೆಲ್‍ಗಳಿಗೆ ಪತ್ರಕರ್ತರಾಗಿದ್ದರು. ಅವರು ಪ್ರಸ್ತುತ ಕೆಲವು ಆನ್‍ಲೈನ್ ಚಾನೆಲ್‍ಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ.ತಮ್ಮದೇ ಆದ ಭಾರತ್ ನ್ಯೂಸ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು.
ಅಪಘಾತದಲ್ಲಿ ಯಾವುದಾದರೂ ಪೂರ್ವಯೋಜಿತ ಕೃತ್ಯಗಳಿವೆಯೇ ಎಂದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಅಪರಿಚಿತ ವಾಹನವನ್ನು ಪತ್ತೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ ಎಂದು ನೇಮಂ ಪೋಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಇದರ ಜೊತೆಗೆ ಹಲವು ಸಂಶಯಗಳು ವ್ಯಾಪಕಗೊಂಡಿದ್ದು ಪೂರ್ವಯೋಜಿತ ಕೃತ್ಯ ಎಂದು ಸಂಶಯಿಸಲಾಗಿದೆ. ಪ್ರತಿಪಕ್ಷ ಯುಡಿಎಫ್ ಹಾಗೂ ಬಿಜೆಪಿ ಸಮಗ್ರ ತನಿಖೆಗೆ ಆಗ್ರಹಿಸಿದೆ. ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು) ಪ್ರದೀಪ್ ಅವರ ದುರ್ಮರಣದ ಕುರಿತು ಶೀಘ್ರವಾದ ವಿಸ್ಕøತ ತನಿಖೆಗೆ ಸರ್ಕಾರಕ್ಕೆ ಮನವಿ ಮಾಡಿದೆ.