ತಿರುವನಂತಪುರ: ಭಾರತೀಯ ರೈಲ್ವೆಯು ಕೇರಳಕ್ಕೆ ಹೆಚ್ಚಿನ ರೈಲು ಸೇವೆಗಳನ್ನು ಪ್ರಾರಂಭಿಸಲಿದ್ದು, ಐದು ದೈನಂದಿನ ರೈಲು ಸೇವೆಗಳನ್ನು ಪುನರಾರಂಭಿಸಲು ದಕ್ಷಿಣ ರೈಲ್ವೆ ಅನುಮತಿ ನೀಡಿದೆ.
ಕೋವಿಡ್ ಸೋಂಕಿನ ಕಾರಣದಿಂದ ಸ್ಥಗಿತಗೊಂಡಿದ್ದ ದೇಶದ ರೈಲು ಸೇವೆಯನ್ನು ಹಂತಹಂತವಾಗಿ ಪುನರಾರಂಭಿಸಲಾಗುತ್ತಿದ್ದು ಲಾಕ್‍ಡೌನ್ ಘೋಷಣೆಯಾದ ಬಳಿಕ ವಿಶೇಷ ರೈಲುಗಳನ್ನು ಹೊರತುಪಡಿಸಿ ಉಳಿದೆಲ್ಲ ರೈಲು ಸೇವೆಗಳು ಮೊಟಕುಗೊಂಡಿದ್ದವು. ತಿರುವನಂತಪುರಂ-ಎರ್ನಾಕುಳಂ ವಂಚಿನಾಡ್ ಎಕ್ಸ್‍ಪ್ರೆಸ್ ಸೋಮವಾರದಿಂದ ಮತ್ತೆ ಸಂಚಾರ ಆರಂಭಗೊಳ್ಳಲಿದೆ. ಎರ್ನಾಕುಳಂ-ತಿರುವನಂತಪುರಂ ಸೇವೆ ಬುಧವಾರ ಆರಂಭವಾಗಲಿದೆ.
ಇತರ ರೈಲುಗಳು:
ತಿರುವನಂತಪುರಂ-ಮಧುರೈ ರೈಲು 23 ರಿಂದ ಪ್ರಾರಂಭವಾಗಲಿದ್ದು, 24 ರಿಂದ ಮರಳಿ ಬರಲಿದೆ. ರೈಲು ಸಂಚಾರ ಸ್ಥಗಿತಗೊಂಡಿದ್ದ ಸಂದರ್ಭ ತಿರುವನಂತಪುರಂ-ಎರ್ನಾಕುಳಂ ಜಂಕ್ಷನ್ ರೈಲು ಸೇವೆ ಸೋಮವಾರದಿಂದ ಪುನರಾರಂಭಗೊಳ್ಳಲಿದೆ. ಎರ್ನಾಕುಳಂ ಜಂಕ್ಷನ್-ಕಣ್ಣೂರು ರೈಲು ಕೂಡ ಮಂಗಳವಾರದಿಂದ ಪುನರಾರಂಭಗೊಳ್ಳಲಿದೆ.
ಮಂಗಳವಾರ ಆರಂಭಗೊಂಡ ಸೇವೆಗಳು:
ತಿರುವನಂತಪುರಂನಿಂದ ಗುರುವಾಯೂರ್‍ಗೆ ಇಂಟರ್‍ಸಿಟಿ ರೈಲು ಸೇವೆ ಮಂಗಳವಾರದಿಂದ ಪ್ರಾರಂಭವಾಯಿತು. ಸಂಖ್ಯೆ 06342 ತಿರುವನಂತಪುರಂ-ಗುರುವಾಯೂರ್ ವಿಶೇಷ ರೈಲು ಮಂಗಳವಾರ ತಿರುವನಂತಪುರಂನಿಂದ ಹೊರಟು ಬುಧವಾರ ತಲಪಲಿದೆ. ತಿರುವನಂತಪುರಂ-ಮಂಗಳೂರು ಸೆಂಟ್ರಲ್ ಎಕ್ಸ್‍ಪ್ರೆಸ್ ಬುಧವಾರ ರಾತ್ರಿ 8.50 ಕ್ಕೆ ತಿರುವನಂತಪುರಂ ಸೆಂಟ್ರಲ್‍ನಿಂದ ಹೊರಡಲಿದೆ. ರಿಟರ್ನ್ ರೈಲು 19 ರಂದು ಆಗಮಿಸುವುದು.
ತಿರುವನಂತಪುರಂ-ಮಧುರೈ ಮತ್ತು ಮಂಗಳೂರು ರೈಲುಗಳು ಶೀಘ್ರದಲ್ಲಿ:
ತಿರುವನಂತಪುರಂ-ಮಧುರೈ ಅಮೃತ ಮತ್ತು ತಿರುವನಂತಪುರಂ-ಮಂಗಳೂರು ಸೇವೆಗಳೂ ಬುಧವಾರದಿಂದ ಪ್ರಾರಂಭವಾಗುತ್ತಿದೆ. ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿದವರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ. ಸಾಮಾನ್ಯ ಟಿಕೆಟ್‍ಗಳ ವಿತರಣೆಯನ್ನು ಪ್ರಾರಂಭಿಸುವ ಬೇಡಿಕೆ ಇದ್ದರೂ ಕೋವಿಡ್ ಮಾನದಂಡಗಳ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಅನುಮತಿ ನೀಡಿಲ್ಲ.
ಐದು ದೈನಂದಿನ ರೈಲು ಸೇವೆಗಳು:
ಭಾರತೀಯ ರೈಲ್ವೆ ಕೇರಳಕ್ಕೆ ಹೆಚ್ಚಿನ ರೈಲು ಸೇವೆಗಳನ್ನು ಪ್ರಾರಂಭಿಸಲಿದೆ. ಐದು ದೈನಂದಿನ ರೈಲು ಸೇವೆಗಳನ್ನು ಪುನರಾರಂಭಿಸಲು ದಕ್ಷಿಣ ರೈಲ್ವೆ ಅನುಮತಿ ನೀಡಿದೆ. ಸೇವೆಗಳನ್ನು ಪೂರ್ಣ ಕಾಯ್ದಿರಿಸುವಿಕೆಯೊಂದಿಗೆ ವಿಶೇಷ ರೈಲುಗಳಾಗಿ ನಿರ್ವಹಿಸಲಾಗುವುದು. ತಿರುವನಂತಪುರಂ ಸೆಂಟ್ರಲ್‍ನಿಂದ ಮಂಗಳೂರಿಗೆ ದಿನನಿತ್ಯದ ಸೇವೆ ಡಿಸೆಂಬರ್ 16 ರಿಂದ ಪ್ರಾರಂಭವಾಗಲಿದೆ. ತಿರುವನಂತಪುರಂ ಸೆಂಟ್ರಲ್‍ನಿಂದ ಎರ್ನಾಕುಳಂ ಜಂಕ್ಷನ್‍ಗೆ ದೈನಂದಿನ ರೈಲು ಡಿಸೆಂಬರ್ 14 ರಿಂದ ಪ್ರಾರಂಭವಾಗಿದೆ. ಎರ್ನಾಕುಳಂ ಜಂಕ್ಷನ್‍ನಿಂದ ಕಣ್ಣೂರುವರೆಗೆ ದೈನಂದಿನ ರೈಲು ಸೇವೆ ಡಿಸೆಂಬರ್ 15 ರಿಂದ ಪ್ರಾರಂಭವಾಗಲಿದೆ. ತಿರುವನಂತಪುರಂ ಕೇಂದ್ರ-ಗುರುವಾಯೂರ್ ದೈನಂದಿನ ರೈಲು 15 ರಂದು ಪುನರಾರಂಭಗೊಳ್ಳಲಿದೆ.