ನವದೆಹಲಿ: ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ ಲಸಿಕೆಯನ್ನು ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮಾರ್ಚ್-ಏಪ್ರಿಲ್ ವೇಳೆಗೆ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ಮಾಡಲಿದೆ.
ಎಸ್ಐಐ ಕೋವಿಶೀಲ್ಡ್ ಉತ್ಪಾದನೆ ಮಾಡುವುದಕ್ಕಾಗಿ ಪಾಲುದಾರಿಕೆಯನ್ನು ಹೊಂದಿದ್ದು, 1,600 ಸ್ವಯಂ ಸೇವಕರಿಗೆ 2, 3ನೇ ಹಂತದ ಲಸಿಕೆ ಟ್ರಯಲ್ ನ್ನು ಸ್ಪಾನ್ಸರ್ ಮಾಡುತ್ತಿದೆ.
ಸೆರಮ್ ಇನ್ಸ್ಟಿಟ್ಯೂಟ್ ಗೆ ಪ್ರಧಾನಿ ಭೇಟಿ ನೀಡಿದ ಬಳಿಕ ಲಸಿಕೆಯನ್ನು ತುರ್ತು ಬಳಕೆಗೆ ಡ್ರಗ್ಸ್ ನಿಯಂತ್ರಕದಿಂದ ಅನುಮತಿ ಪಡೆಯುವುದಾಗಿ ಎಸ್ಐಐ ಸಿಇಒ ಆದಾರ್ ಪೂನಾವಾಲ ಘೋಷಿಸಿದ್ದರು.
ಜೂನ್-ಜುಲೈ 2021 ರ ವೇಳೆಗೆ 400 ಮಿಲಿಯನ್ ಡೋಸ್ ಗಳಷ್ಟು ಲಸಿಕೆ ತಯಾರಿಸುವುದಕ್ಕೆ ಗುರಿ ಹೊಂದಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಪ್ರತಿ ಡೋಸ್ ಲಸಿಕೆಗೆ 2-3 ಡಾಲರ್ ನಷ್ಟಾಗುತ್ತದೆ ಎಂದು ಎಸ್ಐಐ ಹೇಳಿದೆ.