ನವದೆಹಲಿ: ಭಾರತಿ ಏರ್ ಟೆಲ್ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯ ಚಂದಾದಾರರನ್ನು ಗಳಿಸುವ ಮೂಲಕ ರಿಯಲನ್ಸ್ ಜಿಯೋವನ್ನು ಹಿಂದಿಕ್ಕಿದೆ.
ಟೆಲಿಕಾಂ ಉದ್ಯಮದ ಸಕ್ರಿಯ ಚಂದಾದಾರರ ಸಂಖ್ಯೆ ಅಕ್ಟೋಬರ್ ನಲ್ಲಿ 2.5 ಮಿಲಿಯನ್ ಏರಿಕೆಯಾಗಿದೆ. ಇದರೊಂದಿಗೆ ಒಟ್ಟಾರೆ ಸಕ್ರಿಯ ಚಂದಾದಾರರ ಸಂಖ್ಯೆ 961 ಮಿಲಿಯನ್ ಗೆ ಏರಿಕೆಯಾಗಿದೆ. ಟ್ರಾಯ್‍ನ ಟೆಲಿಕಾಂ ವರದಿಯಲ್ಲಿ, ಭಾರ್ತಿ ಏರ್‍ಟೆಲ್‍ನ ಸಕ್ರಿಯ ಚಂದಾದಾರರು ಸುಮಾರು 3 ಮಿಲಿಯನ್ ಏರಿಕೆಯಾಗಿದೆ. ಈ ಮೂಲಕ 2020ರ ಅಕ್ಟೋಬರ್‍ನಲ್ಲಿ ಸುಮಾರು 320 ಮಿಲಿಯನ್ ತಲುಪಿದೆ. ಸಾಂಪ್ರದಾಯಿಕವಾಗಿ ಕಡಿಮೆ ಚಂದಾದಾರರನ್ನು ಒಳಗೊಂಡಿರುವ ಮಹಾರಾಷ್ಟ್ರ(0.7 ಮಿಲಿಯನ್) ಮತ್ತು ಗುಜರಾತ್(0.5 ಮಿಲಿಯನ್) ನಲ್ಲಿ ಭಾರ್ತಿ ಏರ್ಟೆಲ್ ಅತಿ ಹೆಚ್ಚು ಚಂದಾದಾರರನ್ನು ಸೇರಿಸಿದೆ.ಮೊಬೈಲ್ ನೆಟ್ ವರ್ಕ್ ನಲ್ಲಿ ಸಕ್ರಿಯ ಬಳಕೆದಾರರರ ಸಂಖ್ಯೆ ಪ್ರತಿಬಿಂಬಿಸುವ ಪ್ರಮುಖ ಮೆಟ್ರಿಕ್ ವರದಿಯಾದ ವಿಸಿಟರ್ ಲೋಕೇಷನ್ ರಿಜಿಸ್ಟರ್(ವಿಎ???ರ್) ಆಧರಿಸಿ ಸಕ್ರಿಯ ಚಂದಾದಾರರನ್ನು ಲೆಕ್ಕಹಾಕಲಾಗುತ್ತದೆ.
ಒಟ್ಟು ಏರ್‍ಟೆಲ್ ಅಕ್ಟೋಬರ್‍ನಲ್ಲಿ 3.6 ಮಿಲಿಯನ್ ಹೊಸ ಗ್ರಾಹಕರನ್ನು ಸೇರಿಸಿದ್ದು, 2020ರ ಅಕ್ಟೋಬರ್‍ನಲ್ಲಿ ತನ್ನ ಒಟ್ಟು ವೈರ್‍ಲೆಸ್ ಗ್ರಾಹಕರ ಸಂಖ್ಯೆಯನ್ನು 330.3 ಮಿಲಿಯನ್‍ಗೆ ತಲುಪಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರೈ) ಅಂಕಿಅಂಶಗಳು ತಿಳಿಸಿವೆ.
ಏರ್ಟೆಲ್ ನಂತರ ರಿಲಯನ್ಸ್ ಜಿಯೋ, ಒಟ್ಟಾರೆ 2.22 ಮಿಲಿಯನ್ ಹೊಸ ಮೊಬೈಲ್ ಗ್ರಾಹಕರನ್ನು ಸೇರಿಸಿದೆ. ಈ ತಿಂಗಳಲ್ಲಿ ಅದರ ಒಟ್ಟು ಚಂದಾದಾರರ ಸಂಖ್ಯೆಯನ್ನು 406.3 ಮಿಲಿಯನ್ ಗೆ ತಲುಪಿದೆ.