ಮಂಜೇಶ್ವರ: ಬಾಕುಡ ಸಮುದಾಯದ ದೈವಾರಾಧನೆ-ಭೂತಾರಾಧನೆಯ ಮಹತ್ವ ಹಾಗೂ ತುಳು ಸಂಸ್ಕøತಿ, ಜಾನಪದ ಸಾಹಿತ್ಯಕ್ಕೆ ಬಾಕುಡ ಸಮುದಾಯದ ಕೊಡುಗೆ ಎಂಬ ವಿಚಾರಗಳ ಸಂಶೋಧನಾತ್ಮಕ ಕೃತಿಯಾದ " ಸಿರಿಮುಡಿ"ಯ ಲೋಕಾರ್ಪಣೆ ಮುಂದಿನ ಫೆಬ್ರವರಿ 7 ರಂದು ಇಚ್ಲಂಗೋಡು ಶ್ರೀನಾಗಬ್ರಹ್ಮ ಕೋಮಾರು ಚಾಮುಂಡೇಶ್ವರಿ ದೈವಸ್ಥಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಂಘಟನಾ ಸಮಿತಿ ಸಭೆ ಇತ್ತೀಚೆಗೆ ಹೊಸಂಗಡಿಯ ಹಿಲ್ ಸೈಡ್ ಸಭಾಂಗಣದಲ್ಲಿ ನಡೆಯಿತು.
ಬಾಕುಡ ಸಮುದಾಯ ಸಂಘಟನೆಯ ಅಧ್ಯಕ್ಷ ಗುರುವಪ್ಪ ಮಂಜೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಹರೀಶ್ ಮಾಸ್ತರ್ ಅಂಗಡಿಪದವು,ಉಪಾಧ್ಯಕ್ಷರಾಗಿ ಅಚ್ಯುತ ಅಂಗಡಿಪದವು, ನವೀನ್ ಸೋಂಕಾಲ್, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಮಾಸ್ತರ್ ಕೊಡ್ಲಮೊಗರು, ಜೊತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ಅಡ್ಕ, ನವೀನ್ ಬೆದ್ರಡ್ಕ, ಕೋಶಾಧಿಕಾರಿಯಾಗಿ ಶಿವಾನಂದ ಮಂಗಲ್ಪಾಡಿ ರಾಮ ಕಿನ್ನಿಗೋಳಿ, ಪ್ರಧಾನ ಸಂಚಾಲಕರಾಗಿ ತುಳಸೀದಾಸ್ ಮಂಜೇಶ್ವರ, ಚಂದ್ರಹಾಸ ಕತ್ತರಿಕೋಡಿ, ಪ್ರಚಾರ ಸಮಿತಿಗೆ ಬಾಬು ಮಾಸ್ತರ್ ಮಾಡ, ಉದಯ ಸಿ.ಎಚ್.ಬೆದ್ರಡ್ಕ, ಉದಯ ಸೋಂಕಾಲ್, ಮನಮೋಹನ ಅತ್ತಾವರ, ಆರ್ಥಿಕ ಸಮಿತಿಗೆ ರಾಮ ಮಂಗಲ್ಪಾಡಿ, ರಾಮ ತಲಪಾಡಿ, ರಾಘವ ಹೊಸಬೆಟ್ಟು, ಪ್ರವೀಣ್ ಮಂಗಳೂರು, ಸುರೇಶ್ ಹೇರೂರು, ನಿಶಾಂತ್ ಬೆದ್ರಡ್ಕ, ಆಹಾರ ಸಮಿತಿ ಸಂಚಾಲಕರಾಗಿ ಜೆ.ಪಿ.ಮಂಜೇಶ್ವರ, ಶರತ್ ಕಡಂಬಾರ್ ಮೊದಲಾದವರನ್ನು ಆಯ್ಕೆಮಾಡಲಾಯಿತು.
ಸುರೇಶ್ ಮಂಗಲ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಕುಡ ಸಮಾಜದ ಪ್ರಧಾನ ಕಾರ್ಯದರ್ಶಿ ತುಳಸೀದಾಸ್ ಮಂಜೇಶ್ವರ ಸ್ವಾಗತಿಸಿ, ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ ಮಾಸ್ತರ್ ಕೊಡ್ಲಮೊಗರು ವಂದಿಸಿದರು.