ಕಾಸರಗೋಡು: ಒಂದೆಡೆ ಕೋವಿಡ್ ಸೋಂಕು, ಇನ್ನೊಂದೆಡೆ ಚುನಾವಣೆ ಪ್ರಕ್ರಿಯೆಗಳ ಬಿರುಸು ಆದರೂ ಆರೋಗ್ಯ ಕಾರ್ಯಕರ್ತರ ತಂಡವೊಂದು ಕೃಷಿ ರಂಗದಲ್ಲಿ ಸಕ್ರಿಯರಾಗಿದ್ದಾರೆ.
ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರ ತಂಡ ನೇತೃತ್ವದಲ್ಲಿ ಮೊಗ್ರಾಲ್ ಆರೋಗ್ಯ ಕೇಂದ್ರದಲ್ಲಿ ನಡೆಸಲಾಗುತ್ತಿರುವ ಗ್ರೋ ಬ್ಯಾಗ್ ಮೂಲಕದ ತರಕಾರಿ ಕೃಷಿ ಈ ಮೂಲಕ ಗಮನ ಸೆಳೆದಿದೆ. ಕೋವಿಡ್ ಕರ್ತವ್ಯದಲ್ಲಿರುವ ಕಾರಣ ರಜೆ ಪಡೆಯದೇ ದುಡಿಯುಮೆ ನಡೆಸುತ್ತಿರುವ ಇವರು ರಾತ್ರಿ ಕಾಲದಲ್ಲಿ ಗ್ರೋ ಬ್ಯಾಗ್ ನಲ್ಲಿ ಮಣ್ಣು, ಗೊಬ್ಬರ ತುಂಬಿ ತರಕಾರಿ ಕೃಷಿಗೆ ಇಳಿದಿದ್ದಾರೆ.
ಜೈವಿಕ ರೂಪದಲ್ಲಿ ಇಲ್ಲಿ ತರಕಾರಿ ಬೆಳೆಯಲಾಗುತ್ತದೆ. ಕಿರಿಯ ಆರೋಗ್ಯ ಇನ್ಸ್ ಪೆಕ್ಟರರಾದ ಅಖಿಲ್ ಕಾರಾಯಿ, ಕೆ.ಕೆ.ಆದರ್ಶ್, ವೈ.ಹರೀಶ್ ಪ್ರತಿ ರಾತ್ರಿ ನೀರುಣಿಸಿ ಈ ಕೃಷಿಯ ಪೆÇೀಷಣೆ ನಡೆಸುತ್ತಿದ್ದಾರೆ. ಕುಂಬಳೆ ಕೃಷಿಭವನದ ಎಲ್ಲ ಬೆಂಬಲ ಪಡೆದು ಇಲ್ಲಿ ಕೃಷಿ ನಡೆಸಲಾಗುತ್ತಿದೆ. 60 ಗ್ರೋ ಬ್ಯಾಗ್ ಗಳಲ್ಲಿ ಟೊಮೆಟೋ, ಬೆಂಡೆ, ಹರಿವೆ, ಮೆಣಸು, ಅಲಸಂಡೆ ಬದನೆ ಸಹಿತ ತರಕಾರಿ ಸಸಿಗಳು ನಳನಳಿಸುತ್ತಿವೆ. ಫೆಬ್ರವರಿ ತಿಂಗಳ ಕೊನೆಯಲ್ಲಿ ತರಕಾರಿ ಕೊಯ್ಲಿಗೆ ಸಿದ್ಧಗೊಳ್ಳಲಿವೆ ಎಂದು ಈ ಆರೋಗ್ಯ ಕಾರ್ಯಕರ್ತರ ತಂಡ ಅಭಿಪ್ರಾಯಪಡುತ್ತಿದೆ.
ಸಸಿ ನೆಡುವಿಕೆಯ ಉದ್ಘಾಟನೆಯನ್ನು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ನಡೆಸಿದರು. ಕೃಷಿ ಅಧಿಕಾರಿ ಕೆ.ನಾಣುಕುಟ್ಟನ್, ಬ್ಲೋಕ್ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಆರೋಗ್ಯ ಇನ್ಸ್ ಪೆಕ್ಟರ್ ಕುರಿಯಾಕೋಸ್ ಈಪ್ಪನ್, ಕಿರಿಯ ಆರೋಗ್ಯ ಇನ್ಸ್ ಪೆಕ್ಟರ್ ಗಳಾದ ಟಿ.ವಿವೇಕ್, ವೈ.ಹರೀಶ್, ಕೆ.ಕೆ.ಆದರ್ಶ್, ಅಖಿಲ್ ಕಾರಾಯಿ, ಗುಮಾಸ್ತರಾದ ಕೆ.ರವಿಕುಮಾರ್, ಜಿ.ಅಶೋಕನ್ ಮೊದಲಾದವರು ಉಪಸ್ಥಿತರಿದ್ದರು.