ತಿರುವನಂತಪುರ:ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿರುವವರು ಪ್ರತಿನಿಧಿಗಳ ಮೂಲಕ ಪೋಸ್ಟಲ್ ಮತದಾನಕ್ಕೆ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಮತದಾನದ ಅಧಿಕಾರಿಗಳು ಮನೆಗಳಿಗೆ ಬಾರದೆ ಇರುವ ಸಂದರ್ಭದಲ್ಲಿ ಇಂತಹ ಮತದಾನಕ್ಕೆ ಅವಕಾಸ ನೀಡಲಾಗುತ್ತಿದೆ.
ಮತದಾನದ ಮುನ್ನಾ ದಿನ ಅಪರಾಹ್ನ ಮೂರು ಗಂಟೆಯವರೆಗೂ ಮತಪತ್ರಗಳಿಗೆ ಅರ್ಜಿ ಸಲ್ಲಿಸಬಹುದು. ಪಿಪಿಇ ಕಿಟ್ ಧರಿಸಿ ಆಗಮಿಸುವ ಸೋಂಕಿತರ ಬಗ್ಗೆ ಯಾವುದಾದರೂ ಸಂಶಯಗಳು ಕಂಡುಬಂದ ಸಂದರ್ಭ ಅಧಿಕಾರಿಗಳಿಗೆ ಮುಖ ತೋರಿಸಲು ಬಾಧಿತರು ಬಾಧ್ಯಸ್ಥರಾಗಿರಬೇಕು ಎಂದು ಆಯೋಗ ತಿಳಿಸಿದೆ. ಏಜೆಂಟ್ ಅನುಮಾನ ವ್ಯಕ್ತಪಡಿಸಿದರೆ ಮುಖವನ್ನು ತೋರಿಸಲು ತಯಾರಿರಬೇಕು ಎಂದು ಆಯೋಗ ಮಾಹಿತಿ ನೀಡಿದೆ.