ಕೊರೊನಾ ವಿಶ್ವದಾದ್ಯಂತ 218 ದೇಶಗಳಿಗೆ ಹರಡಿದ್ದು, 62.5 ಮಿಲಿಯನ್ ಸೋಂಕು ಪ್ರಕರಣಗಳಿಗೆ ಮತ್ತು 1.4 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆ. ಸೋಂಕಿನ ಎರಡನೇ ಮೂರನೆ ಅಲೆಯ ಭೀತಿಯ ನಡುವೆ ಸಂಶೋಧಕರು, ಔಷಧ ಸಂಸ್ಥೆಗಳು ಕೊರೊನಾ ತಡೆಗೆ ಲಸಿಕೆ ಸಿದ್ಧಪಡಿಸಲು ಸ್ಪರ್ಧಿಸುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ವಿಶ್ವದೆಲ್ಲೆಡೆ 48 ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ.
ಲಸಿಕೆಯ ಕ್ಷಮತೆಯೆಷ್ಟಿರಬೇಕು? ಡಬ್ಲೂಎಚ್‌ಓ ಕ್ಲಿನಿಕಲ್ ಟ್ರಯಲ್‌ನ ಕ್ಷಮತೆ ಶೇ. 70ರಷ್ಟಿರಬೇಕು ಎನ್ನುತ್ತದೆ. ಹಾಗೆಯೆ ಯುಎಸ್‌ಎಫ್‌ಡಿಎ ಶೇ. 50ರಷ್ಟು ಮತ್ತು ಯೂರೋಪಿನ್ ಔಷಧ ಸಂಸ್ಥೆಗಳು ಅದಕ್ಕಿಂತ ಕಡಿಮೆ ಕ್ಷಮತೆಯನ್ನು ಒಪ್ಪಿಕೊಳ್ಳುತ್ತವೆ.
ಜನಪ್ರಿಯ ಲಸಿಕೆಗಳು ಯಾವ ಹಂತದಲ್ಲಿವೆ, ಇದರಲ್ಲಿ ಭಾರತದ ಯಾವೆಲ್ಲ ಲಸಿಕೆಗಳಿವೆ ಎಂಬ
ಭಾರತದ ಲಸಿಕೆಗಳು
ಭಾರತದ 5 ಕಂಪನಿಗಳು ಲಸಿಕೆ ಅಭಿವೃದ್ಧಿಯ ಹಾದಿಯಲ್ಲಿ ಸುಧಾರಿತ ಹಂತ ತಲುಪಿವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಅವುಗಳಲ್ಲಿ ನಾಲ್ಕು 2 ಮತ್ತು 3ನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿದ್ದರೆ ಉಳಿದೊಂದು ಲಸಿಕೆ 1 ಮತ್ತು 2ನೇ ಹಂತದಲ್ಲಿದೆ. ಅವುಗಳ ಪಟ್ಟಿ ಹೀಗಿದೆ.
ಭಾರತ ಬಯೋಟೆಕ್
ಹೈದರಾಬಾದ್ ಮೂಲದ ಭಾರತ ಬಯೋಟೆಕ್ ಐಸಿಎಮ್‌ಆರ್-ಎನ್‌ಐವಿ ಜತೆಯಾಗಿ ಕೋವಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಪ್ರಸ್ತುತ 26,000 ಜನರ ಮೇಲೆ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ.
ಬೆಲೆ: ಘೋಷಣೆಯಾಗಿಲ್ಲ
ಶೇಖರಣೆ: 2°C - 8°C
ಮೈಲ್ಯಾಬ್‌ನ ಕೋವಿಡ್-19 ಆಂಟಿಜೆನ್ ಟೆಸ್ಟ್ ಕಿಟ್‌ಗೆ ಐಸಿಎಮ್‌ಆರ್ ಅನುಮತಿ
ಝೈಡಸ್ ಕ್ಯಾಡಿಲ್ಲಾ
ಅಹ್ಮದಾಬಾದ್ ಮೂಲದ ಝೈಡಸ್ ಕ್ಯಾಡಿಲ್ಲಾ ಝೈಕೋವ್-ಡಿ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಕಳೆದು ತಿಂಗಳು ಕಂಪನಿ 2ನೇ ಹಂತದ ಕ್ಲಿನಿಕಲ್ ಟ್ರಯಲ್ ಮುಗಿಸಿದ್ದು ಡಿಸಿಜಿಐಗೆ ದತ್ತಾಂಶ ಸಲ್ಲಿಸಲಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿತ್ತು. ಡಿಸೆಂಬರ್‌ನಲ್ಲಿ 15 ರಿಂದ 20 ಜನರೊಂದಿಗೆ 3ನೇ ಹಂತದ ಕ್ಲಿನಿಕಲ್ ಟ್ರಯಲ್ ಶುರುವಾಗಲಿದೆ.
ಝೈಕೋವ್-ಡಿ ಕೋವಿಡ್-19 ವೈರಸ್‌ನ ಜೆನೆಟಿಕ್ ಮಟಿರೀಯಲ್‌ನಿಂದಾದ ಡಿಎನ್‌ಎ ಲಸಿಕೆಯಾಗಿದ್ದು ಅದು ಮನುಷ್ಯರ ಜೀವಕೋಶಗಳಲ್ಲಿ ಸಾರ್ಸ್-ಕೋವ್2 ಆಂಟಿಜೆನ್‌ಗಳನ್ನು ಉತ್ಪತ್ತಿ ಮಾಡಿ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಲಸಿಕೆ ನೈಜ ವೈರಸ್ ಅನ್ನು ಬಳಸಿಕೊಳ್ಳುವುದಿಲ್ಲ. ಈ ಲಸಿಕೆ ಹೆಪಾಟಿಸಿಸ್-ಸಿ ಗೆ ಚಿಕಿತ್ಸೆ ನೀಡುವ ಪೆಗಿಎಚ್‌ಟಿಎಮ್ ಚಿಕಿತ್ಸೆಯನ್ನೆ ಬಳಸಿಕೊಳ್ಳುತ್ತದೆ.
ಬೆಲೆ: ಘೋಷಣೆಯಾಗಿಲ್ಲ
ಶೇಖರಣೆ: 2°C - 8°C
ಬಯೋಲಾಜಿಕಲ್ ಇ
ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಡಿಸಿಜಿಐನಿಂದ ಅನುಮೋದನೆ ಪಡೆದ ನಂತರ ಭಾರತದಲ್ಲಿ 1 ಮತ್ತು 2ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ ಎಂದು ಹೇಳಿದೆ. ಈ ಲಸಿಕೆಯನ್ನು ಯುಎಸ್ ಮೂಲದ ಬೇಲರ್ ಕಾಲೇಜ್ ಆಫ್ ಮೆಡಿಸಿನ್ ಮತ್ತು ಯುಎಸ್ ಮೂಲದ ಡೈನಾವಾಕ್ಸ್ ಟೆಕ್ನಾಲಜೀಸ್ ಕಾರ್ಪೊರೇಶನ್ಸ್ನ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಬೆಲೆ: ಘೋಷಣೆಯಾಗಿಲ್ಲ
ಶೇಖರಣೆ: ಘೋಷಣೆಯಾಗಿಲ್ಲ
ಅಂತರಾಷ್ಟ್ರೀಯ ಲಸಿಕೆಗಳು
ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸುತ್ತಿರುವ ಎಜೆಡ್‌ಡಿ1222 ಲಸಿಕೆ ಹಲವು ಭರವಸೆಗಳನ್ನು ಮೂಡಿಸಿದೆ. ಇತ್ತೀಚೆಗೆ ಕಂಪನಿ ಯುಕೆ ಮತ್ತು ಬ್ರೇಜಿಲ್‌ನ 3ನೇ ಹಂತದ ಪೂರ್ವಭಾವಿ ಫಲಿತಾಂಶವನ್ನು ಪ್ರಕಟಿಸಿ ಲಸಿಕೆ ಶೇ. 70 ರಷ್ಟು ಪರಿಣಾಮಕಾರಿ ಎಂದು ಘೋಷಿಸಿತ್ತು.
ಆದರೆ ಫಲಿತಾಂಶ ಎರಡು ವಿಭಿನ್ನ ಡೋಸ್‌ಗಳಲ್ಲಿತ್ತು, ಎರಡು ಪೂರ್ಣ ಡೋಸ್ ನೀಡಿದಾಗ ಲಸಿಕೆ ಶೇ. 62 ರಷ್ಟು ಪರಿಣಾಮಕಾರಿಯಾಗಿತ್ತು ಅದೆ ಒಮ್ಮೆ ಅರ್ಧ ಡೋಸ್ ನೀಡಿ ನಂತರ ಪೂರ್ತಿಯಾಗಿ ನೀಡಿದಾಗ ಲಸಿಕೆ ಶೇ. 90 ರಷ್ಟು ಪರಿಣಾಮಕಾರಿಯಾಗಿತ್ತು.
ಈ ಫಲಿತಾಂಶದಲ್ಲಿನ ಗೊಂದಲಕ್ಕೆ ಉತ್ಪಾದನಾ ದೋಷವೆ ಕಾರಣವೆಂದು ಕಂಪನಿ ಒಪ್ಪಿಕೊಂಡಿದ್ದು, ದತ್ತಾಂಶದ ಸ್ಪಷ್ಟತೆಗಾಗಿ ಹೆಚ್ಚುವರಿ ಟ್ರಯಲ್‌ಗಳನ್ನು ಮಾಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇದೇ ಲಸಿಕೆಯ ಇನ್ನೊಂದು ಆವೃತ್ತಿ ಭಾರತದಲ್ಲಿ ಕೋವಿಶೀಲ್ಡ್ ಎಂಬ ಹೆಸರಿನಲ್ಲಿ ಸೇರಂ ಸಂಸ್ಥೆಯಡಿ ಪರೀಕ್ಷಾ ಹಂತದಲ್ಲಿದೆ.
ಬೆಲೆ: ಅಂದಾಜು ಬೆಲೆ 1,000 ರೂ.ಗಿಂತ ಕಡಿಮೆ
ಶೇಖರಣೆ: 2°C - 8°C
ಅಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ ಪರಿಣಾಮಕಾರಿತ್ವದ ವಿಚಾರದಲ್ಲಿ ಗೊಂದಲ
ಪಿಫೈಜರ್ ಮತ್ತು ಎನ್‌ಬಯೋಟೆಕ್
ಪಿಫೈಜರ್ ಮತ್ತು ಎನ್‌ಬಯೋಟೆಕ್‌ನ ಎಮ್‌ಆರ್‌ಎನ್‌ಎ ಆಧರಿಸಿದ ಲಸಿಕೆ ಬಿಎನ್‌ಟಿ162ಬಿ2 3 ನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿದ್ದು 65 ವಯಸ್ಸಿಗೂ ಮೀರಿದ ಹಿರಿಯರನ್ನು ಒಳಗೊಂಡಂತೆ ಲಸಿಕೆ ಶೇ. 95ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪನಿ ಹೇಳಿದೆ.
ಅಧಿಕೃತ ಹೇಳಿಕೆಯ ಪ್ರಕಾರ ಕಂಪನಿ 2020ರಲ್ಲಿ ಜಾಗತಿಕವಾಗಿ 50 ಮಿಲಿಯನ್ ಡೋಸೆಜ್‌ಗಳನ್ನು ಮತ್ತು 2021ರ ಅಂತ್ಯಕ್ಕೆ 1.3 ಬಿಲಿಯನ್ ಡೋಸೆಜ್‌ಗಳನ್ನು ತಯಾರಿಸುವ ನಿರೀಕ್ಷೆಯಿದೆ. ಆದರೆ ಲಸಿಕೆಯ ಸರಬರಾಜಿಗೆ ಇನ್ನೂ ಅನುಮೋದನೆ ದೊರೆಯಬೇಕಿದೆ.
ಬೆಲೆ: ಡೋಸ್‌ಗೆ$20 ಎಂದು ವರದಿಯಾಗಿದೆ
ಶೇಖರಣೆ: -70 °C
ಮಾಡರ್ನಾ
ನವೆಂಬರ್ 16 ರಂದು ಯುಎಸ್ ಮೂಲದ ಮಾಡರ್ನಾ ಇನ್ನೂ ನಡೆಯುತ್ತಿರುವ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ಗಳ ಪೂರ್ವಭಾವಿ ಫಲಿತಾಂಶ ಆಧರಿಸಿ ತನ್ನ ಲಸಿಕೆ ಎಮ್‌ಆರ್‌ಎನ್‌ಎ-1273 ಶೇ. 94.5ರಷ್ಟು ಪರಿಣಾಮಕಾರಿಯಾಗಿದೆ ಎಂದು ಘೋಷಿಸಿದೆ.
ಬೆಲೆ: ಅಂದಾಜು ಬೆಲೆ $37
ಶೇಖರಣೆ: -2°C
ಜಾನ್‌ಸನ್ ಮತ್ತು ಜಾನ್‌ಸನ್
ಅಕ್ಟೋಬರ್ 23ರಂದು ಜಾನ್‌ಸನ್ ಮತ್ತು ಜಾನ್‌ಸನ್ ಲಸಿಕೆ ಜೆಎನ್‌ಜೆ-78436735ನ 3ನೇ ಹಂತದ ಟ್ರಯಲ್‌ಗಳನ್ನು ಪುನರಾರಂಭಿಸುವುದಾಗಿ ಹೇಳಿತ್ತು. ಅದಕ್ಕಾಗಿ ಕಂಪನಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಅಕ್ಟೋಬರ್ 12 ರಂದು ಲಸಿಕೆ ತೆಗೆದುಕೊಂಡವರಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಂಪನಿ ಪರೀಕ್ಷೆಯನ್ನು ನಿಲ್ಲಿಸಿತ್ತು. ಆದರೆ ಅನಾರೋಗ್ಯಕ್ಕೆ ಲಸಿಕೆಯೆ ಕಾರಣ ಎಂದು ಸಾಬೀತಾಗದಿರುವುದರಿಂದ ಟ್ರಯಲ್ ಮತ್ತೆ ಶುರುವಾಗಲಿದೆ.
ಬೆಲೆ: ಅಂದಾಜು ಬೆಲೆ $10
ಶೇಖರಣೆ: 2°C - 8°C